ಪತ್ರಕರ್ತನಾಗಿ ಪ್ರಕಾಶಕನಾಗಿ ಕೆಲಸ..ಅಲೆಮಾರಿತನ ಬದುಕಿಗಂಟಿಕೊಂಡಿದೆ.. ಒಂದಿಷ್ಟು ಬೆಳಕು, ಒಂದಿಷ್ಟು ಕನಸು , ಒಂದಿಷ್ಟು ಪ್ರೇಮ ಬದುಕಿನ ಗಳಿಕೆ ಎಂದರೆ ಇಷ್ಟೇ.ಸದ್ಯದ ಬೊಗಸೆ ಖಾಲಿ ಇದೆ.. ನಂಗೊತ್ತು ಅದು ಸದಾ ಖಾಲಿಯಾಗಿಯೆ ಇರುತ್ತದೆ..ಈಗ ನನ್ನ ಮುಂದಿರುವುದು ನನ್ನ ಕನಸು. ಅದು ನನ್ನ ಮಗಳ ಹೆಸರು.. ಕಡಲ ಅಲೆಗಳಂತೆ ಅನುಕ್ರಮಣಿಕೆ ಹಂಗಿಲ್ಲದೆ ಕಾಡುವ ನೆನಪುಗಳು.. ನಡೆವ ದಾರಿ ಇನ್ನು ಇದೆ..
ಹಿಡಿಯಷ್ಟು ಪ್ರೀತಿ
ಬೊಗಸೆಯಲ್ಲಿ ಒಂದು ಬೀಜ ನೆಲೆಯೂರುವಷ್ಟೇ ಜಾಗ
ಕಣ್ಣಲೊಂದು ನಿಷ್ಕಳಂಕ ನೋಟ ಇದ್ದರೆ
ಮನುಷ್ಯ ತಾನಾಗಿಯೇ ಅರ್ಥವಾಗುತ್ತಾನೆ
ಬದುಕಿರುವಷ್ಟು ಕಾಲ ಎದೆಯೊಳಗಿರುತ್ತಾನೆ
ನನಗೆ ಜಾತಿಯಿಲ್ಲ ಧರ್ಮವಿಲ್ಲ.. ಸಮಾನತೆಯಲ್ಲಿ ನಂಬುಗೆ, ಚೇ, ಭಗತ್, ಮಾರ್ಕ್ಸ್, ರೂಮಿ, ಅಲ್ಲಮ ಇಷ್ಟದವರು. ಅಸಮಾನ ವ್ಯವಸ್ಥೆ ಬದಲಿಸುವ ಯೋಚಿಸುವವರನ್ನು ಹುಡುಕಿಕೊಂಡು ಹೋಗಿ ಸ್ನೇಹ ಬಯಸುವವನು. ಗೆಳೆತನಕ್ಕಾಗಿ ಕೈ ಚಾಚಿದಾಗ ನನಗೆ ಇಲ್ಲವೆನುಲು ಸಾಧ್ಯವಾಗುವುದೇ ಇಲ್ಲ. ಆದರೆ
ಜಾತಿವಾದದಲ್ಲಿ ಧರ್ಮವಾದದಲ್ಲಿ ಖಾಸಗೀಕರಣ ಅಸಮಾನ ವ್ಯವಸ್ಥೆ ಪರವಿರುವವರ ಜತೆ ಕೈಜೋಡಿಸಲು ನನ್ನಿಂದಾಗದು. ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಭಾಗವಾಗಿ ಇರುವವರ ಕೂಡ ನನಗೆ ಇರಲಾಗದು.. ಇಂಥವರು ಸ್ನೇಹಕ್ಕಾಗಿ ನನ್ನ ಕಡೆ ಕೈಚಾಚುವುದು ಬೇಡ.
ಮಾತಿಗೆ 9480286844
No comments:
Post a Comment