Monday, May 16, 2011

ಹುತಾತ್ಮ ದಿನದ ಸಂದರ್ಭದಲ್ಲಿ ಅಮರ ಹುತಾತ್ಮ ಭಗತ್ ಸಿಂಗರ ಜೈಲಿನ ದಿನಚರಿ



1931 ರ ಮಾರ್ಚ್ 23. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭಾರತೀಯರ ಪಾಲಿಗೆ ಅತ್ಯಂತ ದುಃಖದಾಯಕ ದಿನ. ಅಂದು ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳನ್ನು ಬ್ರಿಟಿಷ್ ಸರ್ಕಾರ ನೇಣಿಗೇರಿಸಿದ ದಿನ. ಇಂದಿಗೂ ಭಗತ್ ಸಿಂಗ್ ಹುತಾತ್ಮನಾಗಿರದಿದ್ದರೆ ಈಗ ಇಷ್ಟು ವರ್ಷದ ಹಿರಿಯರಾಗಿರುತ್ತಿದ್ದರು ಅಯ್ಯೋ, ಆ ದಿನ ಕ್ಯಾಲೆಂಡರಿನಲ್ಲೇ ಇರಬಾರದಿತ್ತು ಎಂದು ದೇಶಭಕ್ತ ಭಾರತೀಯರು (ಹಿರಿಯ ಕಿರಿಯರೆನ್ನದೆ) ಹಂಬಲಿಸುವ ದಿನ. ಅವರ ಬಗ್ಗೆ ನೆನಸುವ ದಿನ.


ಭಗತ್ ಸಿಂಗ್ ತನ್ನ ಕೊನೆಯ ಎರಡು ವರ್ಷಗಳನ್ನು ಜೈಲಿನಲ್ಲಿ ಗಲ್ಲು ಶಿಕ್ಷೆಯನ್ನು ಕಾಯುತ್ತಾ ಕಳೆದಿದ್ದರು. ಈ ಅವಧಿಯಲ್ಲಿ ಹುತಾತ್ಮ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾನೂನು ಸಮರಗಳಲ್ಲಿ ಹೆಚ್ಚು ಪ್ರಚಾರವನ್ನು ಪಡೆದ ಒಂದು ಕಾನೂನು ಸಮರವನ್ನು ನಡೆಸುತ್ತಿದ್ದರು. ಇಷ್ಟೇ ಅಲ್ಲದೆ ನ್ಯಾಯಾಲಯವನ್ನೇ ಮಾದ್ಯಮ ಮಾಡಿಕೊಂಡು ತಮ್ಮ ಕ್ರಾಂತಿಕಾರಿ ಸಂದೇಶಗಳನ್ನು ದೇಶಾದ್ಯಂತ ಪ್ರಚಾರ ಮಾಡಿದರು.



ಅವರ ಹೋರಾಟದ ನಿಜಾಂಶ ತಿಳಿಯದ ಈಗಿನ ಜನತೆ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ಅನ್ಯಾಯವಾಗಿ ನೇಣಿಗೆ ಕೊರಳು ಕೊಟ್ಟರು, ಅವರು ಮನಸ್ಸು ಮಾಡಿದ್ದರೆ ಬದುಕಿರಬಹುದಾಗಿತ್ತು, ಅವರ ಹುತಾತ್ಮರಾಗುವ ನಿರ್ಧಾರ ತಪ್ಪು, ಬದುಕಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗಿತ್ತು ಎಂದೆಲ್ಲಾ ಹೇಳುತ್ತಾರೆ. ಆದರೆ ಭಗತ್ ಸಿಂಗ್ ಅವರು ಖಂಡಿತವಾಗಿಯು ಸುಮ್ಮನೆ ಹುತಾತ್ಮರಾಗಲಿಲ್ಲ. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಅಲ್ಪಾವಧಿಯ ಜೀವಮಾನದಲ್ಲಿ ಎಷ್ಟು ಸಾಧ್ಯವೋ ಅದಕ್ಕಿಂತ ಹೆಚ್ಚಿನ ಕೊಡುಗೆ ಭಗತ್ ಸಿಂಗ್ ಅವರದಿದೆ. ಅವರು ತಮ್ಮ ನೇಣಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನು ಸಮರ ಮಾಡಿ ಸಮಯ ವ್ಯರ್ಥ ಮಾಡದೇ ಆ ಅಮೂಲ್ಯ ಸಮಯವನ್ನು ದೇಶದ ಜನತೆಗೆ ಬ್ರಿಟೀಷ್ ಸರ್ಕಾರದ ಎಡಬಿಡಂಗಿತನವನ್ನು ಅರಿತುಕೊಳ್ಳುವಂತೆ ಮಾಡಿ ದೇಶದ ಜನತೆ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಜೈಲಿನಲ್ಲಿದ್ದೂ ಪ್ರೇರೇಪಣೆ ನೀಡಿದರು.ಅಷ್ಟೇ ಅಲ್ಲ ಜೈಲಿನಲ್ಲಿ ಅವರು ನಾಲ್ಕು ಪುಸ್ತಕಗಳನ್ನೂ ಬರೆದಿದ್ದರು. ಆ ಪುಸ್ತಕಗಳು ಜೈಲಿನಿಂದ ಕಷ್ಟಪಟ್ಟು ಹೊರತರಲ್ಪಟ್ಟಿದ್ದರೂ ನಾಶ ಮಾಡಲ್ಪಟ್ಟಿವೆ. ಜೈಲಿನಲ್ಲೇ ಉಳಿದಿದ್ದ ಯುವ ಕ್ರಾಂತಿಕಾರಿಯ ಟಿಪ್ಪಣೆ ಪುಸ್ತಕ ಮಾತ್ರ ನಮಗೀಗ ಲಭ್ಯವಿದೆ.
ಯುವ ಕ್ರಾಂತಿಕಾರಿಯನ್ನು ಅಧ್ಯಯನ ಮಾಡಲು ಇದೊಂದು ಅದ್ಬುತ ಗ್ರಂಥ.



ಶೀರ್ಷಿಕೆ : The Jail Notebook and Other Writings ಲೇಖಕರು: ಭಗತ್ ಸಿಂಗ್ ಸಂಪಾದಕರು: ಚಮನ್ ಲಾಲ್


ಲಡಾಯಿ ಪ್ರಕಾಶನದಿಂದ ಕನ್ನಡಕ್ಕೆ ಅನುವಾದಗೊಂಡು ಈ ಪುಸ್ತಕವು ಜೂನ್ ತಿಂಗಳಲ್ಲಿ ಹೊರಬರಲಿದೆ .. ಪುಸ್ತಕದ ಅನುವಾದಕರು ನಾ ದಿವಾಕರ

No comments:

Post a Comment