Sunday, July 3, 2011

ಪೀನೀ ಹೂ



ಏಳೆಂಟು ವರ್ಷಗಳ ಹಿಂದೆ ವಿಜಯರಾಘವನ್ ’ಬುಂಡೆ ಹಿಡಿದು’ ಎಂಬ ಅನುವಾದಿತ ಕಾವ್ಯದ ಸಂಕಲನವನ್ನು ಪ್ರಕಟಿಸಿದ್ದರು. ಅದರಲ್ಲಿ ತಾವೋ, ಲಾ ಓತ್ಸು, ಗಿಬ್ರಾನ್, ರಿಲ್ಕ್-ಸೇರಿ ಮೂರು ದಾರಿಯ ತುಂಬಾ ಸುಂದರವಾದ ಕವಿತೆಗಳಿದ್ದವು. ಈಗ ಅವರು ಅಂತಹುದೇ ಮತ್ತೊಂದು ಕಾರ್ಯ ನಿರ್ವಹಿಸಿದ್ದಾರೆ. ನಜೀಂ ಹಿಕ್ಮತ್, ವಾಸ್ಕೋ ಪೋಪ, ಮತ್ತು ಲೋರ್ಕರ ಕವಿತೆಗಳ ಕಂತೆಗಳನ್ನು,ತಾವೋ,ಸೂಫಿ ಮಾರ್ಗಗಳ ಕವಿತೆಗಳನ್ನು ಕನ್ನಡದಲ್ಲಿ ಅನುರೂಪಗೊಳಿಸಿ ಇಲ್ಲಿ ಸಂಕಲಿಸಿದ್ದಾರೆ.

ಎಷ್ಟು ಓದಿದರೂ ದಣಿವಾಗದ ಕಾವ್ಯವಿದು. ಅನುವಾದಕ್ಕೆ ವಿಜಯರಾಘವನ್ ಆಯ್ದುಕೊಳ್ಳುವ ಮಾರ್ಗ ಹಾಸಿಕೊಟ್ಟಿರುವುದಲ್ಲ. ಅದು ಎಂತಿರುವುದೆಂದರೆ, ನನಗೆ ಇದನ್ನು ಹೀಗೆ ಓದಲು ಇಷ್ಟ ಎನ್ನುವಂಥ ಮಾರ್ಗ. ಅದರಲ್ಲಿನ ಕನ್ನಡದಲ್ಲಿ ಲವಲವಿಕೆಯೂ, ನಿರಾಳವೂ, ಆತಂಕವೂ, ವಿಷಣ್ಣತೆಯೂ ತಮ್ಮ ಪಾತ್ರಗಳನ್ನು ಯಥೋಚಿತ ಅಭಿನಯಿಸಿ ಕಾವ್ಯದ ಬದುಕಿನ ಅನನ್ಯ ಋತುಕ್ಷಣಗಳನ್ನು ಹಿಡಿದುಕೊಡುತ್ತವೆ.

ಇವು ಭಾವಾನುವಾದದಲ್ಲಿ ಅದ್ವೈತವಾಗುವ ಲೀಲಾ ರಚನೆಗಳು- ಎಂಬ ’ಬುಂಡೆ ಹಿಡಿದು’ ಕುರಿತ ವಿಮರ್ಶೆಯ ಮಾತು ಇಲ್ಲಿಯೂ ಒಪ್ಪತಕ್ಕದ್ದು. ಈ ಕೃತಿಯ ಓದಿನಿಂದ ನಾನು ಅಪಾರ ಸಂತೋಷವನ್ನು ಸಂಪಾದಿಸಿಕೊಂಡಿದ್ದೇನೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ.

- ಡಾ.ಕೆ.ಸಿ.ಶಿವಾರೆಡ್ಡಿ

No comments:

Post a Comment