Saturday, July 23, 2011

ಪೋಬಿಯ: ಎಚ್ಚರ ತಪ್ಪಿದರೆ ಅಪಾಯ


- ಸಂಪತ್ ಬೆಟ್ಟಗೆರೆ

ಹರುಕು ಬಟ್ಟೆ, ಹಸಿದ ಹೊಟ್ಟೆಯ ನಡುವೆ ಸ್ಲೇಟು, ಬಳಪ ಹಿಡಿದು ಸರಕಾರಿ ಶಾಲೆ, ಅಂಗನವಾಡಿಯತ್ತ ಬರಿಗಾಲಲ್ಲಿ ಹೆಜ್ಜೆ ಇಡುವ ಕನ್ನಡ ಹೈಕಳು; ಶೂ, ಟೈ, ಕೋಟು ಧರಿಸಿ-ಆಟೊ, ಟ್ಯಾಕ್ಸಿ, ಕಾರನೇರಿ ಕೆ.ಜಿ. ಸ್ಟ್ಯಾಂಡರ್ಡ್ಸ್ ಇಂಗ್ಲಿಷ್ ಸ್ಕೂಲ್‌ಗಳತ್ತ ಜರ್ನಿ ಮಾಡುವ ಇಂಗ್ಲಿಷ್ ಮಕ್ಕಳು. ಹಿರಿಯರ ದಿನನಿತ್ಯದ ತಾಪತ್ರಯಗಳೆಲ್ಲ ಕಳೆದು ಹೋಗುತ್ತಿರುವುದು ಅಂತೆಯೇ ಬೆಳೆದು ದೊಡ್ಡವರಾಗುತ್ತಿರುವುದು ಕಾಲದ ಮಹಿಮೆಯೇ? ಸಂದಭರ್ದ ಅನಿವಾರ್ಯತೆಯೇ? ಎಂಬಂತಹ ತಳಮಳಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮನೋವೈದ್ಯ ಡಾ.ಪಿ.ವಿ. ಭಂಡಾರಿಯವರು ‘ಸ್ಕೂಲ್ ಫೋಬಿಯ’ ಕೃತಿಯಲ್ಲಿ ಮಾಡಿದ್ದಾರೆ.

ಅವರು ತಮ್ಮಲ್ಲಿಗೆ ಚಿಕಿತ್ಸೆಗೆಂದು ಬಂದಂತಹ ಎಳೆಮಕ್ಕಳ ಮನಸ್ಥಿತಿಯನ್ನು ‘ಆಪ್ತ ಸಮಾಲೋಚಕ’ನಾಗಿ ಗ್ರಹಿಸಿ ಸಾದೃಶ್ಯ ಘಟನಾವಳಿಗಳಿಗೆ ಅಕ್ಷರರೂಪ ನೀಡಿ, ಕಥೆಗಳನ್ನಾಗಿ ಹೆಣೆದು ಮಾದರಿ ಚಿತ್ತ ಚಿತ್ರಣ ದರ್ಪಣವನ್ನಾಗಿಸಿದ್ದಾರೆ. ಂ+ ಪಡೆಯುವ ಬುದ್ಧಿವಂತೆ 5ನೇ ತರಗತಿ ವಿದ್ಯಾರ್ಥಿ ಸ್ವಾತಿ ಒಂದು ದಿನ ತನ್ನ ತಾಯಿಯ ಬಳಿ ‘‘ಅಮ್ಮ ನಾನು ಸ್ಕೂಲ್‌ಗೆ ಹೋಗೋಲ್ಲ’’ ಎಂದು ಇದ್ದಕ್ಕಿದ್ದಂತೆಯೇ ಹಟ ಹಿಡಿಯುವುದು, ಹತ್ತನೆ ತರಗತಿ ಓದುತ್ತಿರುವ ಮಯೂರ್ ಕೆಲವು ದಿನಗಳಿಂದ ಸಪ್ಪಗಾಗಿ ಓದಿನಲ್ಲಿ ಆಸಕ್ತಿ ಕಳೆದುಕೊಂಡಿರುವುದು ಕ್ರಮವಾಗಿ ಆ ಮಕ್ಕಳ ತಂದೆ ತಾಯಿಗಳಿಗೆ ಆತಂಕ ಹುಟ್ಟಿಸುವ ಸಂಗತಿಗಳಾಗಿ

ಪುಸ್ತಕ : ಸ್ಕೂಲ್ ಫೋಬಿಯಲೇಖಕರು: ಡಾ.ಪಿ.ವಿ. ಭಂಡಾರಿಪ್ರಥಮ ಮುದ್ರಣ: 2011ಬೆಲೆ: 50ರೂ.ಪ್ರಕಾಶಕರು:ಸರಸ್ವತಿ ಬಾಯಿ ಪ್ರಕಾಶನಮಾನಸ ಸದಾನಂದ ಟವರ್ಸ್ ಸಿ.ಟಿ. ಬಸ್‌ಸ್ಟಾಂಡ್ ಉಡುಪಿದೂರವಾಣಿ: 9242124621

ಕಾಡುತ್ತವೆ. ಪುರೋಹಿತರು, ದೇವರು ಎಂದು ಸುತ್ತಾಡುವ ಪೋಷಕರು ಕೊನೆಗೆ ಮನೋವೈದ್ಯ ಭಂಡಾರಿಯವರನ್ನು ಸಂಪರ್ಕಿಸಿದಾಗ ಸ್ವಾತಿಗೆ ‘ಗೀಳು ರೋಗ’ ಮಯೂರನಿಗೆ ‘ಖಿನ್ನತೆ’ಯಿದೆ ಎಂದು ಅರಿವಾಗುತ್ತದೆ.

ಇದೊಂದು ‘ಸ್ಕೂಲ್ ಫೋಬಿಯ’ ಎಂದು ನಿರೂಪಿಸಿದ ಲೇಖಕ, ಕವಿ, ವೈದ್ಯ ಡಾ. ಭಂಡಾರಿ, ಪೋಷಕರೆನಿಸಿಕೊಂಡವರು ಮಕ್ಕಳ ಮುಗ್ಧತೆಯನ್ನಷ್ಟೇ ಅಲ್ಲದೆ ಒಳಮನಸ್ಸಿನ ಸೂಕ್ಷ್ಮತೆಯನ್ನು ತಮ್ಮ ತಿಳಿಗಣ್ಣಿನಿಂದ ನೋಡಬೇಕಾದ ಅವಶ್ಯಕತೆ, ಸಂದರ್ಭ ಹಾಗೂ ಕಾಲದ ತುರ್ತಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ನನ್ನ ಹತ್ತಿರವು ಬಾಕ್ಸ್ ಇದೆ ಸಾರ್ ‘ನಾನೇನು ತಪ್ಪುಮಾಡಲಿಲ್ಲ ಸಾರ್- ಸಾರಿ’ ಎಂಬ ಕಥಾಲೇಖನಗಳಲ್ಲಿ ಶಿಕ್ಷಕರು
ವಿದ್ಯಾರ್ಥಿನಿಯರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಆಜ್ಞಾರ್ಪೂಕ ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಏಕಮುಖ ಧೋರಣೆಯನ್ನು ಸೂಚಿಸುತ್ತದೆ. ಬದಲಿಗೆ ದ್ವಿಮುಖ ಪ್ರೇರಣೆಯ ಅವಶ್ಯಕತೆಯ ಬಗೆಗೆ ಭಂಡಾರಿಯವರು ಗಮನ ಸೆಳೆಯುತ್ತಾರೆ. ‘‘ನನ್ನ ಹೆಸರು ವೆಂಕಟಪ್ಪ ಅಲ್ಲ. ಸನತ್‌ಕುಮಾರ’’ ಎಂಬ ಕಥಾಚಿತ್ರ ಕೀಳರಿಮೆಯಿಂದ ಬಳಲಿ ಬೆಂಡಾದ ಒಬ್ಬ ನತದೃಷ್ಟ ವಿದ್ಯಾರ್ಥಿಯ ಮೂಕ ವೇದನೆಯಾಗಿದೆ. ಮನೆ ದೇವರ ಆಶೀರ್ವಾದದಿಂದ ಜನಿಸಿದವನು ಎಂದು ದೇವರ ಹೆಸರನ್ನೇ ನಾಮಕರಣ ಮಾಡುವ ಪೋಷಕರ ಪ್ರೀತಿ-ಮುಂದೆ ಸಹಪಾಠಿಗಳು ವ್ಯಂಗ್ಯವಾಗಿ ಕರೆಯುವ ಹೆಸರಾಗಿ ಪರಿವರ್ತನೆ ಹೊಂದಿ ಆತನಲ್ಲಿ ಕೀಳರಿಮೆ ಎಂಬ ಭೀತಿಯನ್ನುಂಟು ಮಾಡುವ ದುಃಸ್ವಪ್ನವಾಗಿ ಕಾಡುವುದು ದುರಂತಮಯವಾಗಿ ಚಿತ್ರಿತವಾಗಿದೆ. ಆದುದರಿಂದಲೇ ಉಪಾಧ್ಯಾಯರು ‘ವೆಂಕಟಪ್ಪ’ ಎಂದು ಹಾಜರಿ ಕೂಗಿದೊಡನೆಯೇ- ‘ಸನತ್‌ಕುಮಾರ’ ಎಂದು ತನಗೆ ತಾನೇ ಸಾಕ್ಷೀಕರಿಸಿಕೊಂಡ ಹೆಸರನ್ನು ಕರೆಯಲು ತಾಕೀತು ಮಾಡುತ್ತಾನೆ. (ಇದು ರಾಷ್ಟ್ರಕವಿ ಕುವೆಂಪುರವರು ನನ್ನ ಹೆಸರು ‘ಪುಟ್ಟಪ್ಪ’ನಲ್ಲ, ‘ಸ್ವಾಮಿ ವಿವೇಕಾನಂದ’ ಎಂದು ತನ್ನ ಗುರುಗಳಿಗೆ ತಾಕೀತು ಮಾಡಿದ ಪರಿಯಂತೆ ಕಂಡುಬರುತ್ತದೆ. ಹಾಗಾದರೆ ಕುವೆಂಪುರವರು ಕೂಡ ಸ್ಕೂಲ್ ಫೋಬಿಯದಿಂದ ಬಳಲಿದ್ದರೆ? ಎಂಬ ಪ್ರಶ್ನೆಗೆ ಉತ್ತರವನ್ನು ಮನೋವೈದ್ಯ ಭಂಡಾರಿಯವರೇ ನೀಡಬೇಕಿದೆ!)

‘‘ಫೋಬಿಯ ಎಂದರೆ ಯಾವುದಾದರೂ ಒಂದು ವಿಷಯದ ಬಗ್ಗೆ ವಿಪರೀತ ಅರ್ಥಹೀನವಾದ ಹೆದರಿಕೆ. ಫೋಬಿಯ ಇರುವವರು ಆ ಹೆದರಿಕೆ ಇರುವ ಸ್ಥಳದ ಬಗ್ಗೆ ಯೋಚಿಸಿದರೂ ಕೂಡ ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆತಂಕದ ಚಿಹ್ನೆಗಳು ತೋರಿಬರುತ್ತದೆ. ಫೋಬಿಯ ಇರುವವರು ಫೋಬಿಯ ತರುವಂತಹ ಸ್ಥಳಗಳಿಗೆ ಹೋಗುವುದನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುತ್ತಾರೆ. ಇದನ್ನು
ೞಅಟಜಿಚ್ಞ್ಚಛಿ ಚಿಛಿಜಿಟ್ಟೞಎಂದು ಹೇಳುತ್ತಾರೆ. ‘ಶಾಲಾ ಫೋಬಿಯ’ ಕೂಡ ಒಂದು ಫೋಬಿಯ.. ಶಾಲೆಯನ್ನೇ ನೋಡಿ ಹೆದರುವವರಿದ್ದಾರೆ. ಶಾಲೆ ಬಸ್ಸು ಏರಲು ಹೆದರುವವರಿದ್ದಾರೆ’’ ಎಂದು ತಿಳಿಸುವ ಡಾ. ಪಿ.ವಿ. ಭಂಡಾರಿ ಮಕ್ಕಳ ಜಗತ್ತಿನ ಒಳತೋಟಿಯನ್ನು ಅರ್ಥೈಸುವ ಪ್ರಯತ್ನಕ್ಕೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಅಂಕದ ಪರದೆಯನ್ನು ಸರಿಸಿ ಸ್ಕೂಲ್ ಫೋಬಿಯದ ನೈತಿಕ ದರ್ಶನಕ್ಕೆ ಕರೆ ನೀಡುತ್ತಾರೆ. ಈ ಕೃತಿಯನ್ನು ಕುತೂಹಲಕ್ಕಾದರೂ ಪೋಷಕರು ಹಾಗೂ ಶಿಕ್ಷಕರು ಓದಿದ್ದೇಯಾದರೆ ಕಳೆದು ಹೋಗಿರುವ ಮಕ್ಕಳು ಬಂಧನದಲ್ಲಿರುವ ‘ಅಡಗು ತಾಣ’ ದೊರೆಯಬಹುದೇನೋ?

No comments:

Post a Comment