ದಿ. ಎಂ. ವ್ಯಾಸ ಅವರ ನೆನಪಿಗಾಗಿ ‘ತರಂಗ’ ಮತ್ತು ವ್ಯಾಸರ ಪುತ್ರ ಡಾ. ಎಂ. ತೇಜಸ್ವಿ ವ್ಯಾಸ್ ಸಂಯೋಜಿಸಿದ ‘ವ್ಯಾಸ ಕಥಾಸ್ಪರ್ಧೆ’ಯ ಮೊದಲ ಬಹುಮಾನ ಅನುಪಮಾ ಪ್ರಸಾದ್ ಕಾಸರಗೋಡು ಅವರು ‘ಖಾದಿ ಅಂಗಿ’ ಕಥೆಗೆ, ಮತ್ತು ಎರಡನೆಯ ಬಹುಮಾನ ಕಸ್ತೂರಿಬಾಯಿರಿ, ಬಿಜಾಪುರ ಅವರು ‘ಎರಡು ರೆಕ್ಕೆಗಳು’ ಕಥೆಗೆ ಪಡೆದಿದ್ದಾರೆ.
ಮೂರನೆಯ ಬಹುಮಾನಕ್ಕೆ ‘ಬೇಟೆ‘ – ಇಂದ್ರಕುಮಾರ್ ಎಚ್.ಬಿ, ದಾವಣಗೆರೆ ಮತ್ತು ‘ನಂಜು’ -ವಿಜಯಾ ಮೋಹನ್,ತುಮಕೂರು ಅರ್ಹರಾಗಿದ್ದಾರೆ.
ಸಮಾಧಾನಕರ ಬಹುಮಾನ ‘ಸಾಗುವಾನಿ ಬಾಗಿಲು’ ಕಥೆಗೆ -ಸಂಧ್ಯಾ ಹೊನಗುಂಟಿಕರ್, ಗುಲ್ಬರ್ಗಾ ಅವರಿಗೆ ಹಾಗು ‘ಹೀಗೊಬ್ಬ ಪಾಂಡುರಂಗ ಕಾಳೆ’ ಕಥೆಗೆ -ಶ್ವೇತಾ ನರಗುಂದ, ಬೆಳಗಾವಿ ಅವರಿಗೆ ನೀಡಲಾಗಿದೆ.
ಕಥಾಸ್ಪರ್ಧೆಗೆ ಫಕೀರ್ ಮಹಮ್ಮದ್ ಕಟ್ಪಾಡಿ,ಪ್ರೊ. ಎಚ್.ಎಸ್. ರಾಘವೇಂದ್ರ ರಾವ್ಜ ಮತ್ತು .ಪಿ. ಬಸವರಾಜು ಅವರು ತೀರ್ಪುಗಾರರಾಗಿದ್ದರು.
No comments:
Post a Comment