Wednesday, August 31, 2011

‘ಹಳದಿ ಚಿಟ್ಟೆ’ಗೆ ಲಲಿತಾ ಸಿದ್ಧಬಸವಯ್ಯ ಅವರ ಟಿಪ್ಪಣಿ



ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಲಲಿತಾ ಸಿದ್ಧಬಸವಯ್ಯ ಅವರು ಬರೆದ ಟಿಪ್ಪಣಿ.

-ಲಲಿತಾ ಸಿದ್ಧಬಸವಯ್ಯ.

`ಹಳದಿ ಚಿಟ್ಟೆ’ ಮತ್ತು `ಪೀನಿ ಹೂ ‘ ಎರಡನ್ನು ಓದಿದೆ. `ಪೀನಿ ಹೂ ‘ ಹೆಚ್ಚು ನಿಗದ ಓದನ್ನು ಡಿಮ್ಯಾಂಡ್ ಮಾಡುವ ಪುಸ್ತಕ. ನಾನಿದನ್ನು ಮತ್ತೆ ಓದಬೇಕಾಗಿದೆ, ನನಗೆ ದಕ್ಕಲು. ಬೇರೆ ನೆಲದಿಂದ ಕಿತ್ತು ತಂದ ಗಿಡವನ್ನು ಹೊಸ ಮಣ್ಣಿಗೆ ಹೊಂದಿಸಲು ವಿಶೇಷ ಗಮನ ಕೊಡುವ ಹಾಗೆ ಅನುವಾದಗಳನ್ನು ಅವಕ್ಕೆ ಸಲ್ಲಬೇಕಾದ ಮಯರ್ಾದೆಯೊಂದಿಗೇ ಓದಬೇಕು, ಸದರ ವಹಿಸುವಂತಿಲ್ಲ ! ಇದರಲ್ಲಿ ಕೆಲವನ್ನು ಅನಿಕೇತನದಲ್ಲಿ ಓದಿದ್ದೆ. ಅನುವಾದದ ದಿಗ್ಗಜ ಎನಿಸಿಕೊಂಡಿರುವ ನಿಮ್ಮ ಈ ಕೆಲಸದ ಬಗ್ಗೆ ಆತುರವಾಗಿ ಏನನ್ನಾದರೂ ಹೇಳಹೊರಡುವುದು ಅನುಚಿತವಾದೀತು.
ಹಳದಿ ಚಿಟ್ಟೆ , ಬಹು ದಿನದ ನಂತರ ಒಂದಕ್ಷರ ಬಿಡದೆ ಓದಿದ ಪುಸ್ತಕ. ಇದರ ಎಲ್ಲ ಪದ್ಯಗಳನ್ನೂಆಸಕ್ತಿಯಿಂದ ಓದಿ ಮುಗಿಸಿದೆ. ಸಂಕಲನದ ಅನೇಕ ಪದ್ಯಗಳು ಇಷ್ಟವಾದವು. ಒಂದು ಬರಹ ನಮಗೆ ಇಷ್ಟವಾಗುವುದಕ್ಕೆ ನಮ್ಮೊಳಗಿನ ಮಾನಸಿಕ ಸಂರಚನೆಯೇ ಕಾರಣವಿರಬೇಕು. ಅದಕ್ಕೆ ರುಚಿಸುವುದನ್ನು ಅದು ತಕ್ಷಣ ಒಪ್ಪಿಕೊಳ್ಳುತ್ತದೆ. ನನಗೆ ಸಂಕಲನದ ಇನ್ ಬಾಕ್ಸುಗಳು, ಸಂದಿಗ್ಧ, ಹಾರುತ್ತ ಬಂದಿಳಿದ ಹಕ್ಕಿ, ಅಜ್ಜಿಗೆ ಏಕೆ ದುಃಖವಾಗಿಲ್ಲ, ಹಬ್ಬದ ದಿನ, ರಾಮಚಂದ್ರರ ನೆನಪು, ಹೊಸಮನೆ ಕಪ್ಪೆ……., ಇಪ್ಪತ್ತೈದು ವರ್ಷದ ಹಿಂದಣ ಯಾತ್ರೆ, ಎರಡು ಹಕ್ಕಿಗಳು, ವಿಲ್ ಬರೆದ ದಿನ, ಹಬ್ಬದ ದಿನದ ತಾಯಿ, ಸೂಳೆಮನೆ, ಒಳಗಿಂದ ಒಂದು ನಿಃಶ್ವಾಸ…, ಧರ್ಮ ಚಕ್ರ, ವೃದ್ಧಾಶ್ರಮದಲ್ಲಿ , ಆಸ್ಪತ್ರೆಯ ಮುಂದೊಷ್ಟು ಜನ, ಈ ಪದ್ಯಗಳು ಬಹಳ ಇಷ್ಟವಾದುವು.
ಇವೇ ಯಾಕಿಷ್ಟ ಎಂದುಕೊಂಡರೆ ನಾನೂ ಹೀಗೆ ದಿನನಿತ್ಯಗಳನ್ನೆ ಪದ್ಯವಾಗಿಸುವುದು ಹೆಚ್ಚು! ಮತ್ತು ಅದಕ್ಕಿಂತ ಮುಖ್ಯವಾದದ್ದು ಕವಿಯಾಗಿ ಗೆಲ್ಲುವುದು ನೀವು ಈ ಪದ್ಯಗಳಲ್ಲೆ ಎಂದು ನನ್ನ ಎಣಿಕೆ. ಚಿಕ್ಕ ಸಂಗತಿಗಳು, ಘಟನೆಗಳು, ಹಠಾತ್ತನೆ ಹೊಳೆದ ಒಂದು ಭಾವ, ಒಂದು ಭೇಟಿ ಇಂಥವುಗಳನ್ನು ನೀವು ಪದಗಳಲ್ಲಿ ಚಿತ್ರವತ್ತಾಗಿ ಕಟ್ಟಿಕೊಡಬಲ್ಲಿರಿ. ಅವುಗಳೊಳಗಿನ ನಾಟಕೀಯತೆ ಗುಣದಿಂದಾಗಿ ಅವು ನಮ್ಮೊಳಗೆ ಮರು ನಿಮರ್ಾಣವಾಗುತ್ತವೆ. ಈ ನಿಮರ್ಿತಿಯ ನಿಮರ್ಿತಿಯೇ ಆ ಪದ್ಯವನ್ನು ನಮಗೆ ಇಷ್ಟಗೊಳಿಸುತ್ತದೆಯೆಂದು ತೋರುತ್ತದೆ. ಹೀಗೆ ನನ್ನೊಳಗೆ ಇಳಿದು ಸಂವಹನವನ್ನು ಪ್ರಫéುಲ್ಲಗೊಳಿಸಿದ ಮೇಲಿನ ಪದ್ಯಗಳಲ್ಲೆಲ್ಲ ಹಬ್ಬದ ದಿನದ ತಾಯಿ ಮತ್ತು ವೃದ್ಧಾಶ್ರಮ ನನಗೆ ವಿಶೇಷ ಇಷ್ಟವಾದುವು. ಈ ಪದ್ಯಗಳನ್ನು ನಾನು ಮತ್ತೆ ಮತ್ತೆ ಓದಿದೆ.
ದಡವಿಲ್ಲದ ಸಾಗರ, ಸಮತಾಳಿಗೊಂದು, ನೆಯಿಗೆ, ಮಾಯದ ಮೋಡಿ, ನೀರುಕುಡಿಯಲು ಬಂದ ನಾಯಿ ಇವು ಬುದ್ಧಿಯ ಕೈ ಮೇಲಾದ ರಚನೆಗಳಾದರೂ ಅವುಗಳ ತಾಕರ್ಿಕತೆಯಿಂದ ಸೆಳೆಯುತ್ತವೆ.
ಪದ್ಯಗಳಲ್ಲಿ ನನಗೆ ಪ್ರಿಯವಾದ ಸಾಲುಗಳನ್ನು ಅಪರೂಪ ಎನಿಸಿದ ರೂಪಕಗಳನ್ನು( ಉದಾ; ಮೊದಲು ಕೊಳಕ್ಕೆ ಕಲ್ಲು ಬೀರಿ ಬಿಂಬ ಹುಡುಕಲು ಬಳಿಕ ಯತ್ನಿಸುವುದು, ಹಕ್ಕಿ ಕೂಗಿಗೂ ಮೊದಲೆ ತಾವು ಸೇರಿ ತನ್ನ ಕೊರಳಿಗೆ ತಾನೇ ಕೇಳುಗನಾಗುವುದು ) ಗುರುತು ಮಾಡಿದ್ದೇನೆ. ಇದು ಮೊದಲ ಓದಿನ ನನ್ನ ಅನಿಸಿಕೆ.
ಕನ್ನಡ ಬರಹ ಕ್ಷೇತ್ರದಲ್ಲಿ ಎಲ್ಲ ರೀತಿಯಲ್ಲು ಗಟ್ಟಿನೆಲೆಯಲ್ಲಿ ಗುರುತಿಸಿಕೊಂಡಿರುವ ನೀವು ನನಗೆಪುಸ್ತಕ ಕಳುಹಿಸಿ ನನ್ನಿಂದ ಅಭಿಪ್ರಾಯ ಕೇಳಿದ್ದಕ್ಕೆ ನಾನು ಆಭಾರಿ.

Tuesday, August 16, 2011

`ನನ್ನ ಮೆಚ್ಚಿನ ಪುಸ್ತಕ': ಮತ್ತೆ ಬರಲಿವೆ ಸಾಲು ಸಾಲು ಪುಸ್ತಕ

ಪುಸ್ತಕ ಪ್ರೇಮಿಗಳಿಗೆ ಸಿಹಿ ಸುದ್ದಿಯ ಸಿಂಚನ. ಕನ್ನಡದ ಹಲವು ಹಿರಿಯ ಸಾಹಿತಿಗಳ ಸಮಗ್ರ ಗದ್ಯ, ನಾಟಕಗಳು ಇನ್ನು ಕೆಲವೇ ದಿನಗಳಲ್ಲಿ ಪುಸ್ತಕದ ಅಂಗಡಿಗಳಲ್ಲಿ ದೊರೆಯಲಿವೆ. ಅಲ್ಲದೆ, ಕನ್ನಡ ಪುಸ್ತಕಗಳ ಕುರಿತು ಅಭಿರುಚಿ ಮೂಡಿಸುವ ಉದ್ದೇಶದಿಂದ `ನನ್ನ ಮೆಚ್ಚಿನ ಪುಸ್ತಕ` ಉಪನ್ಯಾಸ ಮಾಲೆ ಬೆಂಗಳೂರಿನ ಆಯ್ದ ಕಾಲೇಜುಗಳಲ್ಲಿ ಆರಂಭವಾಗಲಿದೆ
ಕನ್ನಡದ ಖ್ಯಾತ ಸಾಹಿತಿಗಳ ಆಯ್ದ ಕೃತಿಗಳನ್ನು ಬ್ರೈಲ್ ಲಿಪಿಗೆ ಅಳವಡಿಸುವ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಕಾರ್ಯ ಮುಗಿದಿದ್ದು ಇದೇ 26ರಂದು 15 ಪುಸ್ತಕಗಳು ಬಿಡುಗಡೆಯಾಗಲಿವೆ. ವೈದ್ಯಕೀಯ ಸಾಹಿತ್ಯ ಮಾಲೆಯಡಿ ಇನ್ನೂ 25 ಪುಸ್ತಕಗಳು ಓದುಗರ ಕೈಸೇರಲು ಸಿದ್ಧವಾಗಿವೆ.

ಈ ಕುರಿತು `ಪ್ರಜಾವಾಣಿ`ಗೆ ಮಾಹಿತಿ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಅವರು, ಡಾ.ಚಂದ್ರಶೇಖರ ಕಂಬಾರರ ಎಲ್ಲ ನಾಟಕಗಳನ್ನು ಒಳಗೊಂಡಿರುವ ಪುಸ್ತಕ, ಎಚ್.ಎಸ್. ಶಿವಪ್ರಕಾಶ್ ಅವರ ಸಮಗ್ರ ನಾಟಕಗಳು, ಪು.ತಿ. ನರಸಿಂಹಾಚಾರ್ ಅವರ ಸಮಗ್ರ ಗದ್ಯ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿವೆ ಎಂದು ತಿಳಿಸಿದರು.

ತಿ.ನಂ. ಶ್ರೀಕಂಠಯ್ಯ ಅವರ ಸಮಗ್ರ ಗದ್ಯದ ಪುನರ್ ಮುದ್ರಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಸುಜನಾ ಅವರ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕು ಎಂಬ ತೀರ್ಮಾನವನ್ನು ಪ್ರಾಧಿಕಾರದ ಸಭೆಯಲ್ಲಿ ಕೈಗೊಳ್ಳಲಾಗಿದೆ.

`ಕನ್ನಡ ಕಟ್ಟಿದವರು ಮಾಲೆ`ಯಡಿ 25 ಪುಸ್ತಕಗಳು ಬರಲಿವೆ. ಕನ್ನಡದ ಕಟ್ಟಾಳುಗಳಾದ ಬಿ.ಎಂ. ಶ್ರೀಕಂಠಯ್ಯ, ಮ. ರಾಮಮೂರ್ತಿ, ಕಂಬಳಿ ಸಿದ್ದಪ್ಪ, ಫ.ಗು. ಹಲಕಟ್ಟಿ, ಹುಯಿಲಗೋಳ ನಾರಾಯಣ ರಾಯರು, ಅ.ನ. ಕೃಷ್ಣರಾಯರು ಮುಂತಾದವರ ಕುರಿತು ಈ ಮಾಲೆಯಲ್ಲಿ ಪ್ರತ್ಯೇಕ ಪುಸ್ತಕಗಳು ಬಿಡುಗಡೆಯಾಗಲಿವೆ ಎಂದರು.

ಈ ಮಾಲೆಯ 25 ಪುಸ್ತಕಗಳು ಅಕ್ಟೋಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿವೆ. ಒಟ್ಟು 100 ಪುಸ್ತಕಗಳನ್ನು ಈ ಮಾಲೆಯಡಿ ತರುವ ಉದ್ದೇಶ ಪ್ರಾಧಿಕಾರದ್ದು ಎಂದರು.

ವೈದ್ಯಕೀಯ ಸಾಹಿತ್ಯ: ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಕೃತಿಗಳನ್ನು ತರಬೇಕು ಎಂಬ ಉದ್ದೇಶದಿಂದ ಚಾಲನೆ ನೀಡಲಾದ `ವೈದ್ಯಕೀಯ ಸಾಹಿತ್ಯ ಮಾಲೆ`ಯಡಿ ಇನ್ನೂ 25 ಪುಸ್ತಕಗಳು ಸಿದ್ಧವಾಗಿವೆ. ಇವುಗಳನ್ನೂ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ನನ್ನ ಮೆಚ್ಚಿನ ಪುಸ್ತಕ`: ಮೈಸೂರು, ಗದಗ, ಸಿಂಧಗಿ, ಜಮಖಂಡಿ, ಗುಲ್ಬರ್ಗ ಪ್ರದೇಶಗಳಲ್ಲಿ ಈಗಾಗಲೇ ಆರಂಭವಾಗಿರುವ `ನನ್ನ ಮೆಚ್ಚಿನ ಪುಸ್ತಕ` ಉಪನ್ಯಾಸ ಕಾರ್ಯಕ್ರಮವನ್ನು ಸೆಪ್ಟೆಂಬರ್‌ನಿಂದ ಬೆಂಗಳೂರಿನಲ್ಲೂ ಆರಂಭಿಸಲಾಗುವುದು. ನಗರದ ನ್ಯಾಷನಲ್ ಕಾಲೇಜು, ಜೈನ್ ಕಾಲೇಜು, ಕ್ರೈಸ್ಟ್ ಕಾಲೇಜು ಸೇರಿದ ಂತೆ ಕೆಲವು ಕಾಲೇಜುಗಳ ಕನ್ನಡ ವಿಭಾಗದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಸಲಾಗುವುದು.

26ರಂದು ಬಿಡುಗಡೆಯಾಗಲಿರುವ ಬ್ರೈಲ್ ಲಿಪಿಯ ಪುಸ್ತಕಗಳು...

ಮಲೆನಾಡಿನ ಚಿತ್ರಗಳು, ಪಕ್ಷಿಕಾಶಿ (ಕುವೆಂಪು), ಚೋಮನ ದುಡಿ (ಶಿವರಾಮ ಕಾರಂತ), ನಾದಲೀಲೆ, ಸಖಿಗೀತ (ದ.ರಾ. ಬೇಂದ್ರೆ), ಸೂರ್ಯನ ಕುದುರೆ ಮತ್ತು ಇತರ ಕಥೆಗಳು (ಯು.ಆರ್. ಅನಂತಮೂರ್ತಿ), ತುಘಲಕ್ (ಗಿರೀಶ ಕಾರ್ನಾಡ್), ಪರಿಸರದ ಕತೆ (ಕೆ.ಪಿ. ಪೂರ್ಣಚಂದ್ರ ತೇಜಸ್ವಿ).

ಸಂಧ್ಯಾರಾಗ (ಅನಕೃ), ಮೈಸೂರು ಮಲ್ಲಿಗೆ (ಕೆ.ಎಸ್. ನರಸಿಂಹಸ್ವಾಮಿ), ಮಂಕುತಿಮ್ಮನ ಕಗ್ಗ (ಡಿ.ವಿ.ಜಿ.), ಗರತಿಯ ಹಾಡು (ಹಲಸಂಗಿ ಗೆಳೆಯರು), ಟೊಳ್ಳುಗಟ್ಟಿ (ಟಿ.ಪಿ. ಕೈಲಾಸಂ), ಜೀವಧ್ವನಿ (ಚನ್ನವೀರ ಕಣವಿ), ಕಲ್ಲು ಸಕ್ಕರೆ ಕೊಳ್ಳಿರೊ (ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ). ಬ್ರೈಲ್ ಲಿಪಿಯ ಪುಸ್ತಕಗಳ ತಲಾ 31 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಒಂದೊಂದು ಪ್ರತಿಗೂ 1,500 ರೂಪಾಯಿ ವೆಚ್ಚವಾಗಿದೆ. ಇಡೀ ಯೋಜನೆಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಸಿದ್ಧಲಿಂಗಯ್ಯ ತಿಳಿಸಿದರು.

ಕರಾಳ ಕಾಲದ ಬೂಟುಗಾಲಿನ ಸದ್ದು

ಜಂಬಣ್ಣ ಅಮರಚಿಂತ ಅವರ ಹೊಸ ಪುಸ್ತಕದ ಅವಲೋಕನ

ಹರ್ಷಕುಮಾರ್ ಕುಗ್ವೆ

ಒಂದೆಡೆ ರಜಾಕಾರರ ದೌರ್ಜನ್ಯ, ದಬ್ಬಾಳಿಕೆಗಳು ಮುಂದುವರಿಯುತ್ತಿದ್ದಂತೆ, ಧರ್ಮದ್ವೇಷಿಗಳ ದೌರ್ಜನ್ಯಗಳಿಗೆ ಒಳಗಾಗಿ ಸಾಯುವ ಪರಿಸ್ಥಿತಿ ತಲುಪಿದ ಗೋಪಾಲಸಿಂಗ್‌ನಂತಹವರ ಜೀವರಕ್ಷಣೆಯ ಕಾರ್ಯದಲ್ಲಿ ಮದರ್‌ಸಾಬುನಂತಹ ಮನುಷ್ಯರು ತಮ್ಮ ಜೀವವನ್ನೂ ಒತ್ತೆ ಇಡುವ ಧೈರ್ಯ ತೋರುತ್ತಾರೆ


1947 ರ ಆಗಸ್ಟ್ 15ರ ಮಧ್ಯರಾತ್ರಿ ಭಾರತದ ನಾಯಕರಿಗೆ ಬ್ರಿಟಿಷರಿಂದ ಅಧಿಕಾರ ದೊರೆಯಿತು. ಆದರೆ, ಬ್ರಿಟಿಷ್ ಸಂಸ್ಥಾನವಾಗಿದ್ದ ಹೈದರಾಬಾದ್ ಸಂಸ್ಥಾನವನ್ನು ಅದರ ಅಧಿನಾಯಕ ಹೈದರಾಬಾದಿನ ನಿಜಾಮ ಭಾರತ ಒಕ್ಕೂಟದೊಳಗಾಗಲಿ, ಪಾಕಿಸ್ತಾನಕ್ಕಾಗಲಿ ಸೇರಿಸಲು ನಿರಾಕರಿಸಿದ. ಖಾಸಿಂ ರಿಜ್ವಿ ಎಂಬಾತನ ನಾಯಕತ್ವದಲ್ಲಿ ರಜಾಕರ ಸೈನಿಕರ ಪಡೆಯು ನಿಜಾಮನ ರಕ್ಷಣೆಯಲ್ಲಿ ತೊಡಗಿತ್ತು. ತಮ್ಮ ಸಂಸ್ಥಾನದ ರಕ್ಷಣೆಯ ಹೆಸರಲ್ಲಿ ಈ ರಜಾಕರರು ಹಳ್ಳಿ ಹಳ್ಳಿಗಳಲ್ಲಿ ತಮಗೆದುರಾದವರ ಮೇಲೆ, ಮುಸಲ್ಮಾನರಲ್ಲದವರ ಮೇಲೆ, ಕಮ್ಯುನಿಸ್ಟ್ಟರ ಮೇಲೆ ಭೀಕರ ಹಲ್ಲೆ, ದೌರ್ಜನ್ಯ ನಡೆಸಿದರು. ನಿಜಾಮನ ರಕ್ಷಣೆಯನ್ನು ಇಸ್ಲಾಂ ಧರ್ಮ ರಕ್ಷಣೆಯೊಂದಿಗೆ ಸಮೀಕರಿಸಿ ಜಿಹಾದ್ಗೆ ಕರೆನೀಡಿ ಕಾಫಿರ್ಗಳನ್ನು ಭೇಟೆಯಾಡತೊಡಗಿತ್ತು ರಜಾಕಾರರ ಪಡೆ. ಈ ಹೊತ್ತಿಗೆ ಭಾರತದ ಆಹ್ವಾನಕ್ಕೆ ನಿಜಾಮ ಬಗ್ಗದಿದ್ದಾಗ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರು ಭಾರತದ ಸೈನ್ಯವನ್ನು ನುಗ್ಗಿಸಿ ನಿಜಾಮನನ್ನು ಬಗ್ಗುಬಡಿಯುವ ನಿರ್ಧಾರ ಕೈಗೊಂಡರು. ಈ ಹಿನ್ನೆಲೆಯಲ್ಲಿ 1948 ರ ಸೆಪ್ಟೆಂಬರ್ 13 ರಿಂದ 18 ರವರೆಗೆ ಆಪರೇಷನ್ ಪೋಲೊ ಎಂಬ ರಹಸ್ಯ ಹೆಸರಿನ ಪೊಲೀಸ್ ಕಾರ್ಯಾಚರಣೆ ನಡೆಸಲಾಯಿತು. ರಜಾಕಾರರನ್ನು ಬಗ್ಗುಬಡಿದ ಭಾರತದ ಸೇನೆ ಅಂತಿಮವಾಗಿ ನಿಜಾಮನನ್ನು ಮಣಿಸಿ ಹೈದರಾಬಾದ್ ಸಂಸ್ಥಾನವನ್ನು ಭಾರತದೊಳಗೆ ಸೇರಿಸಿಕೊಂಡಿತು. ಈ ಸೈನಿಕ ಕಾರ್ಯಾಚರಣೆಯ ದುರಂತವೆಂದರೆ ನಿಜಾಮನ ಅನಾಗರಿಕ ರಜಾಕಾರರ ಮೇಲಿನ ಸಿಟ್ಟು ಅಮಾಯಕ ಮುಸ್ಲಿಮರ ಮೇಲೆ ತಿರುಗಿ ಲಕ್ಷಾಂತರ ಅಮಾಯಕ ಮುಸ್ಲಿಮರು ಬರ್ಬರ ಹತ್ಯೆಗೊಳಗಾದದ್ದು. ಭೂಮಾಲೀಕರ ವಿರುದ್ಧ ಹಾಗೂ ಭೂಮಾಲೀಕರಿಗೆ ಬೆಂಬಲವಾಗಿ ನಿಂತಿದ್ದ ನಿಜಾಮ ಮತ್ತು ರಜಾಕಾರರ ವಿರುದ್ಧ ಜೀತಗಾರರನ್ನು ಸಂಘಟಿಸಿ ಸಶಸ್ತ್ರ ಭೂಹೋರಾಟವನ್ನು ಸಂಘಟಿಸುತ್ತಿದ್ದ ಕಮ್ಯುನಿಸ್ಟ್ ಕಾರ್ಯಕರ್ತರ ಮೇಲೆಯೂ ಸರ್ದಾರ್ ಪಟೇಲರ ಉಕ್ಕಿನ ಪಾದಗಳು ಊರಿದವು.

ದೇಶದ ಚರಿತ್ರೆಯ ಈ ಕಾಲಘಟ್ಟವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕವಿ, ಕೃತಿಕಾರ ಜಂಬಣ್ಣ ಅಮರಚಿಂತ ಅವರು ರಚಿಸಿರುವ ಕಾದಂಬರಿ ಬೂಟುಗಾಲಿನ ಸದ್ದು. ನಿಜ. ರಜಾಕಾರರ ಬೂಟುಗಾಲಿನ ಸದ್ದುಗಳನ್ನು ಹಾಗೂ ಅದರಡಿ ಅಮಾಯಕರ ನರಳಾಟದ ಆರ್ತನಾದವನ್ನು ಈ ಕಾದಂಬರಿ ಸಶಕ್ತವಾಗಿ ಚಿತ್ರಿಸುತ್ತದೆ. ರಾಯಪುರದ ಮಕ್ತಲ್ ಪೇಟೆಯ ಒಂದು ಅಗಸರ ಕುಟುಂಬದ ದಂಪತಿಗಳಾದ ರಂಗಪ್ಪ, ಮಂಗಮ್ಮ ಹಾಗೂ ಇವರ ಮಗ ನಲ್ಲಜೋಮರನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿಯ ಕತೆ ಸಾಗುತ್ತದೆ.

ಭೂಮಾಲೀಕ ದರೂರು ರಾಮಿರೆಡ್ಡಿಯ ಬಳಿ ಸಾಲಗಾರನಾದ ರಂಗಪ್ಪನ ಕುಟುಂಬ ಒಂದೆಡೆ ಭೂಮಾಲೀಕನ ಬೆದರಿಕೆಯಿಂದ ಬಳಲಿ ಹೋಗಿದ್ದರೆ ಮತ್ತೊಂದೆಡೆ ರಜಾಕಾರರ ಕಿರುಕುಳಗಳಿಗೆ ಈಡಾಗುತ್ತದೆ. ಈ ನಡುವೆ ರಜಾಕಾರರ ದೌರ್ಜನ್ಯದ ವಿರುದ್ಧವಿದ್ದ ಜನರ ಆಕ್ರೋಶ ಭುಗಿಲೇಳುವ ಸೂಚನೆಗಳು ಕಾಣುತ್ತಿರುತ್ತವೆ. ಕೆಲ ಕಾಂಗ್ರೆಸ್ ಪುಡಾರಿಗಳೂ, ಆರ್ಯಸಮಾಜದವರೂ ಸ್ಥಳೀಯ ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿರುತ್ತಾರೆ. ಈ ನಡುವೆ ಹಿಂದೂ ಮುಸ್ಲಿಂ ಇಬ್ಬರಿಂದಲೂ ಒಳ್ಳೇ ವ್ಯಕ್ತಿ ಎಂದು ಕರೆಸಿಕೊಳ್ಳುವ ಮದರ್‌ಸಾಬ್ ಮಾನವತೆಯ ಸಾಕಾರಮೂರ್ತಿಯಾಗಿ ಕಷ್ಟದಲ್ಲಿರುವವರಿಗೆ ನೆರವಾಗುತ್ತಾ ಇರುತ್ತಾನೆ. ರಜಾಕಾರರ ವಿರುದ್ಧ ಯಾರೊಬ್ಬರೂ ಬಾಯಿ ಬಿಡದ ಪರಿಸ್ಥಿತಿಯಲ್ಲಿ ಮುಬಾರಕ್ ಎನ್ನುವ ಹುಚ್ಚು ಬಾಲಕ ತೊಬಾಕ್ ತೇಕ್ ಸಿಂಗ್ ಕತೆಯ ಹುಚ್ಚರ ಶೈಲಿಯಲ್ಲಿ ಮರವೊಂದನ್ನು ಹತ್ತಿ ತಿರಂಗಿ ಝಂಡಾ ಏರಿಸಿಯೇ ಸಿದ್ಧ ಎಂದು ಬೋಲೋ ಭಾರತ್ ಮಾತಾ ಕೀ ಜೈ, ಮಹಾತ್ಮ ಗಾಂಧೀಜೀ ಕೀ ಜೈ ಎಂದು ಎಲ್ಲರ ಕಂಗೆಡಿಸಿ ಅವನು ಕಾಲಿಟ್ಟ ಟೊಂಗೆ ಮುರಿದು ಪ್ರಾಣ ಕಳೆದುಕೊಳ್ಳುತ್ತಾನೆ.

ಒಂದೆಡೆ ರಜಾಕಾರರ ದೌರ್ಜನ್ಯ, ದಬ್ಬಾಳಿಕೆಗಳು ಮುಂದುವರಿಯುತ್ತಿದ್ದಂತೆ, ಧರ್ಮದ್ವೇಷಿಗಳ ದೌರ್ಜನ್ಯಗಳಿಗೆ ಒಳಗಾಗಿ ಸಾಯುವ ಪರಿಸ್ಥಿತಿ ತಲುಪಿದ ಗೋಪಾಲಸಿಂಗ್‌ನಂತಹವರ ಜೀವರಕ್ಷಣೆಯ ಕಾರ್ಯದಲ್ಲಿ ಮದರ್‌ಸಾಬುನಂತಹ ಮನುಷ್ಯರು ತಮ್ಮ ಜೀವವನ್ನೂ ಒತ್ತೆ ಇಡುವ ಧೈರ್ಯ ತೋರುತ್ತಾರೆ. ಯಾವಾಗ ನಿಜಾಮನ ಸೈನ್ಯದ ಮೇಲೆ ಭಾರತದ ಸೈನ್ಯ ಮುಗಿಬೀಳುತ್ತದೆಯೋ ಆಗ ಪರಿಸ್ಥಿತಿ ಉಲ್ಟಾ ಆಗಿ ಯಾವ ಪಾಪವನ್ನೂ ಮಾಡದ ಮುಸಲ್ಮಾನರ ಮಾನ, ಪ್ರಾಣ, ಆಸ್ತಿ ಪಾಸ್ತಿಗಳು ಬಲಿಯಾಗುತ್ತವೆ. ಮಾನವ ಪ್ರೇಮದ ಸಂಕೇತವಾದ ಮದರ್‌ಸಾಬರ ಮನೆ ಅಂಗಡಿಗಳೂ ಲೂಟಿಕೋರರ ಪಾಲಾಗುವ, ಇದನ್ನು ಕಂಡು ಹತಾಶೆಗೊಳ್ಳುವ ಮದರ್ ಸಾಬ್ ಧರೆಗುರುಳುವ ಚಿತ್ರಣಗಳು ಮನಸ್ಸನ್ನು ಕದಡುತ್ತವೆ.
ಹೀಗೆ ಬೂಟುಗಾಲಿನ ಸದ್ದು ದೇಶದ ಒಂದು ಪ್ರಮುಖ ಚಾರಿತ್ರಿಕ ಸಂದರ್ಭವು ನಮ್ಮ ನಾಡಿನಲ್ಲಿ ಧ್ವನಿತವಾದ ಬಗೆಯನ್ನು ಉತ್ತಮವಾಗಿ ಕಟ್ಟಿಕೊಡುತ್ತದೆ. ಅಲ್ಲಲ್ಲಿ ಚರಿತ್ರೆಯ ಕೆಲವು ಘಟನೆಗಳನ್ನು ವಿವರಿಸುವಾಗ ಆ ವಿವರಗಳು ಕಾದಂಬರಿಯ ಚೌಕಟ್ಟನ್ನು ಮೀರಿರುವುದು, ಹಾಗೂ ಕೆಲವು ಉಪ ಶೀರ್ಷಿಕೆಗಳು ಸಹ ಹಾಗಿರುವುದು ಕೃತಿಯ ಕಾದಂಬರಿಯ ಕಲಾತ್ಮಕತೆಗೆ ತೊಡಕಾಗಿವೆ. ಕಾದಂಬರಿಗೆ ಮುನ್ನುಡಿಯಾಗಿ ಡಾ. ಅಮರೇಶ ನುಗಡೋಣಿಯವರು ನೀಡಿರುವ ಚರಿತ್ರೆಯ ಹಿನ್ನೆಲೆ ಸಹಕಾರಿಯಾಗಿದೆ ಎನ್ನಬಹುದು


Tuesday, August 9, 2011

ಚೇ.. ಲೋಕಕ್ಕೆ ಅಡಿ ಇಡುವ ಮುನ್ನ ..ನಮ್ಮ ಹೊಸ ಪುಸ್ತಕ್

C£ÀĪÁzÀPÀgÀ ªÀiÁvÀÄ

ªÀiÁ£ÀªÀ£À C¨sÀÄåzÀAiÀÄzÀ ºÁ¢AiÀÄ°è JzÀÄgÁVgÀĪÀ ªÀÄvÀÄÛ EA¢UÀÆ JzÀÄgÁUÀÄwÛgÀĪÀ ¸ÀªÁ®ÄUÀ¼ÀÄ ªÉÊ«zsÀåªÀÄAiÀÄ. vÀ£Àß ¸ÁªÀiÁfPÀ-DyðPÀ ªÀÄvÀÄÛ ¸ÁA¸ÀÌøwPÀ ªÀÄÄ£ÀßqÉUÁV ¸ÀzÁ £ÉʸÀVðPÀ ¸ÀA¥À£ÀÆä®UÀ¼À£ÀÄß CªÀ®A©¸ÀÄvÀÛ¯Éà ªÀÄÄ£ÀßqɪÀ ªÀÄ£ÀÄPÀÄ® J¯ÉÆèà MAzÉqÉ ¸ÁªÀÄÄzÁ¬ÄPÀ »vÁ¸ÀQÛUÀ½UÉ PÀlÄÖ©zÀÄÝ EzÉà fêÀ¥ÀgÀ ¸ÀA¥À£ÀÆä®UÀ¼À£ÀÄß ±ÉÆö¸À®Ä vÉÆqÀUÀÄvÀÛzÉ. vÀ£ÀÆä®PÀ vÀ£Àß ¨sËwPÀ CUÀvÀåvÉUÀ¼À£ÀÄß FqÉÃj¹PÉƼÀÄîªÀ ªÀÄ£ÀÄPÀÄ®zÀ ºÀA§®PÉÌ, ZÁjwæPÀªÁV C©üªÀÈ¢Þ ºÉÆA¢gÀĪÀ ªÀiÁ£ÀªÀ£À ¨Ë¢ÞPÀ QæAiÉÄUÀ¼ÀÄ ¥ÀÆgÀPÀªÁV PÁAiÀÄ𠤪Àð»¸ÀÄvÀÛªÉ. ¥ÁæaãÀ PÁ®¢AzÀ »rzÀÄ CªÁðaãÀ PÁ®zÀªÀgÉUÉ ªÀiÁ£ÀªÀ ¸ÀªÀiÁd vÀ£Àß C©üªÀÈ¢Þ ¥ÀxÀzÀ°è vÉÆqÀPÀÄAlÄ ªÀiÁqÀĪÀ J®èªÀ£ÀÆß ¤£ÁðªÀÄ ªÀiÁqÀÄvÀÛ¯Éà §A¢gÀĪÀÅzÀÄ ZÁjwæPÀ ¸ÀvÀå. ºÁUÉAiÉÄà vÀ£Àß ¸ÁªÀÄÄzÁ¬ÄPÀ C¹ävÉUÀ¼À gÀPÀëuÉUÁV ªÀÄvÀÄÛ ¸ÁªÀiÁfPÀ-DyðPÀ ªÀÄÄ£ÀßqÉUÁV ªÀiÁ£ÀªÀ ¸ÀªÀiÁd vÀ£ÀUÉ JzÀÄgÁUÀĪÀ J®è ªÉÊgÀÄzsÀåUÀ¼À£ÀÆß CgÀV¹PÉƼÀÄîvÀÛ¯Éà ªÀÄÄ£ÀßqÉ¢gÀĪÀÅzÀÆ CµÉÖà ¸ÀvÀå. ªÀÄ£ÀÄPÀÄ®zÀ F ªÀÄÄAzÀrAiÀÄ eÁr£À¯Éèà ¸ÀªÀiÁdzÀ MAzÀÄ ªÀUÀð vÀ£Àß ¸ÁªÀiÁfPÀ ªÀÄvÀÄÛ DyðPÀ ¥Á槮å¢AzÀ CxÀªÁ ¨sËUÉÆýPÀ ªÁå¥ÀPÀvɬÄAzÀ, ªÀiÁ£ÀªÀ ¸ÀªÀiÁdªÀ£ÀÄß ¸À®ºÀĪÀ £ÉʸÀVðPÀ ¸ÀA¥À£ÀÆä®UÀ¼À£ÀÄß vÀ£Àß PÀ§AzsÀ ¨ÁºÀÄUÀ½AzÀ DPÀæ«Ä¹, Erà ¸ÀªÀiÁdªÀ£ÀÄß vÀ£Àß ¤AiÀÄAvÀætPÉÆ̼À¥Àr¸À®Ä ºÉtUÁqÀĪÀÅzÀ£ÀÄß EwºÁ¸ÀzÀ ««zsÀ PÁ®WÀlÖUÀ¼À°è, «©ü£Àß ¸ÀégÀÆ¥ÀUÀ¼À°è PÁt§ºÀÄzÀÄ. UÀįÁªÀÄVj ªÀåªÀ¸ÉܬÄAzÀ ¸ÀªÀÄPÁ°Ã£À ¥ÀæeÁ¸ÀvÁÛvÀäPÀ ªÀåªÀ¸ÉÜAiÀĪÀgÉUÀÆ EzÉà ¥À槮 ªÀUÀðUÀ¼Éà ªÀiÁ£ÀªÀ ¸ÀªÀiÁdªÀ£ÀÄß ¤AiÀÄAwæ¸ÀÄwÛgÀĪÀÅzÀ£ÀÄß PÁt§ºÀÄzÀÄ. ªÀÄvÉÆÛAzÉqÉ ªÀÄ£ÀÄPÀÄ®ªÀ£ÀÄß ¸À®ºÀĪÀ £ÉʸÀVðPÀ ¸ÀA¥À£ÀÆä®UÀ¼À£ÀÄß vÀªÀÄä fêÁvÀäUÀ¼À G½«UÉ CUÀvÀå«zÀݵÀÄÖ ªÀiÁvÀæ §¼À¹ ¥ÀæPÀÈwAiÉÆA¢UÉ ¸ÀºÀ¨Á¼Éé £ÀqɸÀĪÀ ªÀiÁ£ÀªÀ ¸ÀªÀiÁdzÀ ªÀÄvÉÆÛAzÀÄ ªÀUÀðªÀ£ÀÆß EwºÁ¸ÀzÀ°è PÁt§ºÀÄzÀÄ.

F JgÀqÀÆ ªÀUÀðUÀ¼À £ÀqÀÄ«£À ¸ÀÄ¢ÃWÀð ¸ÀAWÀµÀðªÉà ªÀÄ£ÀÄPÀÄ®zÀ EwºÁ¸ÀzÀ ¸ÀÆPÀëöävÉUÀ¼À£ÀÄß ºÉÆgÀUÉqÀºÀÄvÀÛzÉ. AiÀiÁªÀÅzÉà PÁ®WÀlÖzÀ®Æè ªÀiÁ£ÀªÀ ¸ÀªÀiÁdzÀ°è ªÀåPÀÛªÁUÀĪÀ F ¸ÀAWÀµÀðzÀ ªÀÄÆ®PÀªÉà ªÀÄ£ÀÄPÀÄ® vÀ£Àß G½«UÉ ºÉƸÀ DAiÀiÁªÀÄUÀ¼À£ÀÆß PÀAqÀÄPÉƼÀÄîvÁÛ §A¢zÉ. ºÁUÁVAiÉÄà EwºÁ¸ÀzÀ ¥ÀæwAiÉÆAzÀÄ PÁ®WÀlÖzÀ®Æè F JgÀqÀÄ ªÀUÀðUÀ¼À £ÀqÀÄªÉ WÀµÀðuÉ £ÀqÉAiÀÄÄvÀÛ¯Éà §A¢zÉ. eÁUÀwPÀ EwºÁ¸ÀzÀ°è ªÀiÁ£ÀªÀ ¸ÀªÀiÁd vÀ£Àß zÁ¸ÀåzÀ ¸ÀAPÉÆïÉUÀ¼À£ÀÄß PÀ¼Àa vÀ£ÀßzÉà DzÀ ¸ÀéAwPÉAiÀÄ£ÀÆß, C¹ävÉAiÀÄ£ÀÆß gÀQë¹PÉƼÀî®Ä C£ÉÃPÀ ªÀiÁUÀðUÀ¼À£ÀÄß C£ÀĸÀj¹zÉ. UÀįÁªÀÄVjAiÀÄ «gÀÄzÀÞ ºÉÆÃgÁl, H½UÀªÀiÁ£Àå ªÀåªÀ¸ÉÜAiÀÄ ¤ªÀÄÆð®£É, zsÀªÀiÁðzsÁjvÀ ¥Àæ¨sÀÄvÀézÀ ¤gÁPÀgÀuÉ, ¸ÁªÀiÁædå±Á»UÉ ¥ÀæwgÉÆÃzsÀ »ÃUÉ ºÀ®ªÀÅ «zsÁ£ÀUÀ¼À°è ªÀÄ£ÀÄPÀÄ® EwºÁ¸ÀzÀ ºÁ¢AiÀÄ£ÀÄß PÀæ«Ä¹zÉ. F ¥ÀæwAiÉÆAzÀÄ ºÀAvÀzÀ®Æè ªÀÄ£ÀÄPÀÄ®PÉÌ ¥ÉæÃgÀPÀ ±ÀQÛAiÀiÁV, GvÉÛÃdPÀ ±ÀQÛAiÀiÁV PÁAiÀÄ𠤪Àð»¹gÀĪÀÅzÀÄ ªÀiÁ£ÀªÀ£À°è ¸Áé¨sÁ«PÀªÁVAiÉÄà CAvÀUÀðvÀªÁVgÀĪÀ ºÉÆÃgÁlzÀ ªÀÄ£ÉÆèsÁªÀ, ¸ÀAWÀµÀðzÀ ªÁAbÉ ªÀÄvÀÄÛ UÉ®ÄèªÀ ºÀoÀ. ºÁUÁVAiÉÄà ªÀÄ£ÀÄPÀÄ®zÀ EwºÁ¸ÀªÀ£ÀÄß JgÀqÀÄ ªÀUÀðUÀ¼À £ÀqÀÄ«£À ¸ÀAWÀµÀðzÀ »£É߯ÉAiÀįÉèà UÀ滸ÀĪÀÅzÀÄ C¤ªÁAiÀÄðªÁUÀÄvÀÛzÉ. F ¸ÀAWÀµÀðzÀ ºÁ¢UÉ MAzÀÄ ªÉÊeÁÕ¤PÀ vÀ¼ÀºÀ¢ ªÀÄvÀÄÛ ¸ÉÊzÁÞAwPÀ DAiÀiÁªÀÄ zÉÆgÉvÀzÀÄÝ 18-19£ÉAiÀÄ ±ÀvÀªÀiÁ£À¢A¢ÃZÉUÉ JAzÀÄ ºÉüÀ§ºÀÄzÀÄ.

PÀ¼ÉzÀ ±ÀvÀªÀiÁ£ÀzÀ ¥ÁægÀA©üPÀ ªÀµÀðUÀ¼À°è ªÀÄ£ÀÄPÀÄ® C£ÉÃPÀ jÃwAiÀÄ d£ÁAzÉÆî£ÀUÀ¼À£ÀÄß, «¥ÀèªÀPÁj ¨É¼ÀªÀtÂUÉUÀ¼À£ÀÄß, «ªÉÆÃZÀ£Á ºÉÆÃgÁlUÀ¼À£ÀÄß PÀArvÀÄÛ. ¥sÁæ£ïì, dªÀÄð¤, El° ªÀÄÄAvÁzÀ gÁµÀÖçUÀ¼À°è d£À¸ÁªÀiÁ£ÀågÀÄ vÀªÀÄä ¨sÀ«µÀåªÀ£ÀÄß vÁªÉà gÀƦ¹PÉƼÀÄîªÀ ¤nÖ£À°è ¥Àæ¨sÀÄvÀéUÀ¼À «gÀÄzÀÞ, ±ÉÆõÀuÁ ªÀåªÀ¸ÉÜAiÀÄ «gÀÄzÀÞ, zÀªÀÄ£ÀPÁj ¥ÀæªÀÈwÛAiÀÄ «gÀÄzÀÞ zÀ¤ JwÛzÀÄÝ 20£ÉAiÀÄ ±ÀvÀªÀiÁ£ÀzÀ C£ÉÃPÀ «ªÉÆÃZÀ£Á ºÉÆÃgÁlUÀ½UÉ ¥ÉæÃgÀPÀ ±ÀQÛAiÀiÁV ¥Àjt«Ä¹vÀÄÛ. JgÀqÀÄ ªÀĺÁAiÀÄÄzÀÞUÀ¼À £ÀqÀĪÉAiÉÄà C£ÉÃPÀ ¸ÀtÚ-zÉÆqÀØ gÁµÀÖçUÀ¼À «ªÉÆÃZÀ£ÉAiÀÄ£ÀÆß PÀAqÀ PÀ¼ÉzÀ ±ÀvÀªÀiÁ£ÀzÀ ¥ÀƪÁðzsÀð, d£À¸ÀAWÀµÀðUÀ½UÉ ºÉƸÀ ªÀÄÄ£ÀÄßr §gÉ¢zÀÝ£ÀÄß UÀÄgÀÄw¸À§ºÀÄzÀÄ. ªÀ¸ÁºÀvÀıÁ» CAvÀåUÉÆAqÀgÀÆ ¤£ÁðªÀĪÁUÀzÉ ¸ÁªÀiÁædå±Á»AiÀÄ gÀÆ¥ÀzÀ°è ¥ÀÄ£ÀB Erà dUÀvÀÛ£ÀÄß DPÀæ«Ä¸À®Ä ªÀÄÄAzÁVzÀÆÝ EzÉà ¥ÀæxÀªÀiÁzsÀðzÀ¯ÉèÃ. eÁUÀwPÀ ¸ÀA¥À£ÀÆä®UÀ¼À PÉÆæÃrüÃPÀgÀt ªÀÄvÀÄÛ ±ÉÆõÀuÉ PÉ®ªÉà ¥À槮 gÁµÀÖçUÀ¼À ªÀÄĶ×AiÀÄ°è ¹®ÄQzÁUÀ vÀªÀÄä ªÀÄÆ® C¹ävÉUÀ¼À£Éßà PÀ¼ÉzÀÄPÉƼÀÄîªÀ ©üÃwUÉƼÀUÁzÀ C£ÉÃPÀ gÁµÀÖçUÀ¼ÀÄ ¸Áé¨sÁ«PÀªÁVAiÉÄà ¸ÁªÀiÁædå±Á»AiÀÄ «gÀÄzÀÞ ¸ÉmÉzÀÄ ¤®è¨ÉÃPÁ¬ÄvÀÄ. CAvÀºÀ ¥ÀÄlÖ gÁµÀÖçUÀ¼À ¥ÉÊQ PÀÆå¨Á vÀ£ÀßzÉà DzÀ ªÉʲµÀÖöåUÀ½AzÀ ºÉÆgÀºÉƪÀÄÄävÀÛzÉ.

CªÉÄjPÁ ªÀÄvÀÄÛ «ÄvÀæ gÁµÀÖçUÀ¼À ¸ÀªÀÄgÀ²Ã®vÉ C£ÉÃPÀ ¸ÀtÚ ¥ÀÄlÖ gÁµÀÖçUÀ½UÉ ªÀiÁgÀPÀªÁzÀAvÉAiÉÄÃ, ¸ÀA¥À£ÀÆä®UÀ¼À PÉÆæÃrüÃPÀgÀtzÀ ¥ÀjuÁªÀĪÁV C£ÉÃPÀ gÁµÀÖçUÀ¼ÀÄ ¥ÀgÁªÀ®A§£ÉUÉ M¼ÀUÁzÀzÀÄÝ PÀ¼ÉzÀ ±ÀvÀªÀiÁ£ÀzÀ «²µÀÖ «zÀåªÀiÁ£À. F ¤nÖ£À¯Éèà ¯Áån£ï CªÉÄjPÁ zÉñÀUÀ¼À, «±ÉõÀªÁV PÀÆå§ ªÀÄvÀÄÛ ¨ÉÆ°«AiÀiÁzÀAvÀºÀ ¥ÀÄlÖ gÁµÀÖçUÀ¼À EwºÁ¸À UÀªÀÄ£À ¸É¼ÉAiÀÄÄvÀÛzÉ. F gÁµÀÖçUÀ¼À «ªÉÆÃZÀ£ÉUÁV ¸ÁªÀiÁædå±Á»UÀ¼ÉÆqÀ£É ¸ÀªÀÄgÀPÉÌ ¤®è®Ä ±ÀPÀÛgÀ®èzÀ ¸ÀtÚ PÁæAwPÁj UÀÄA¥ÀÄUÀ¼ÀÄ vÀªÀÄä PÁæAwAiÀÄ bÀ® ºÁUÀÆ ºÉÆÃgÁlzÀ PÉaѤAzÀ¯Éà d£À¸ÁªÀiÁ£ÀågÀ£ÀÄß «ªÉÆÃZÀ£ÉAiÀÄ ªÀiÁUÀðzÀ°è PÉÆAqÉÆAiÀÄÝ «ÃgÀUÁxÉ EA¢UÀÆ vÀªÀÄä ¥Àæ¸ÀÄÛvÀvÉAiÀÄ£ÀÄß G½¹PÉÆAqÀħA¢zÉ. ºÁUÁVAiÉÄà F PÁæAwPÁj ªÀiÁUÀðzÀ ºÀjPÁgÀgÁV C£Éð¸ÉÆÖà ZÉ UÀĪÁgÀ ªÀÄvÀÄÛ ¦üqÀ¯ï PÁå¸ÉÆÖçà zÀAvÀPÀxÉUÀ¼ÁV EwºÁ¸ÀzÀ°è CdgÁªÀÄgÀgÁVzÁÝgÉ.

CªÉÄjPÀzÀAvÀºÀ §ÈºÀvï gÁµÀÖçªÀ£ÀÄß ªÀÄt¹ vÀªÀÄä d£ÀvÉUÉ «ªÉÆÃZÀ£ÉAiÀÄ£ÀÄß MzÀV¹PÉÆlÖ ZÉ ªÀÄvÀÄÛ PÁå¸ÉÆÖçà CªÀgÀ PÁæAwAiÀÄ ªÀiÁUÀð ¹AiÉÄgÁæ ªÉÄøÁÖç ¨ÉlÖzÀ PÀtªÉAiÀĵÉÖà zÀÄUÀðªÀÄ, CµÉÖà PÀpt. UÉj¯Áè AiÀÄÄzÀÞ ¥ÀgÀA¥ÀgÉUÉ MAzÀÄ «²µÀÖ DAiÀiÁªÀĪÀ£ÀÄß PÀ°à¹, D¼ÀĪÀ ªÀUÀðUÀ¼À ¥À槮 C¸ÀÛçUÀ¼À£ÀÄß ªÀÄt¹zÀ ZÉ CªÀgÀ ºÉÆÃgÁlzÀ ªÀiÁUÀð C«¸ÀägÀtÂÃAiÀĪÀµÉÖà C®è C£ÀÄPÀgÀtÂÃAiÀĪÀÇ ºËzÀÄ. ZÉ CªÀgÀÄ UÀw¹ £Á®ÄÌ zÀ±ÀPÀUÀ¼Éà UÀw¹ªÉ. F CªÀ¢üAiÀÄ°è ªÀiÁ£ÀªÀ ¸ÀªÀiÁd ¸ÁPÀµÀÄÖ §zÀ¯ÁªÀuÉUÀ¼À£ÀÄß PÀArzÉ. ¸ÁªÀiÁædå±Á» zsÉÆÃgÀuÉ £ÀªÀ GzÁgÀªÁzÀzÀ gÀÆ¥ÀzÀ°è £ÀªÀ ªÀ¸ÁºÀvÀıÁ»AiÀÄ£ÀÆß ¥ÉÆö¸ÀÄwÛzÉ. d£À¸ÀAWÀµÀðUÀ¼ÀÄ vÀªÀÄäzÉà DzÀ ºÉƸÀ DAiÀiÁªÀÄUÀ¼À£ÀÄß ¥ÀqÉzÀÄPÉƼÀÄîwÛªÉ. DzÀgÀÆ ZÉ CªÀgÀ ºÉÆÃgÁlzÀ zsÉÆÃgÀuÉ EA¢UÀÆ vÀ£Àß ¥Àæ¸ÀÄÛvÀvÉAiÀÄ£ÀÄß G½¹PÉÆAqÀÄ §A¢zÀÝgÉ CzÀPÉÌ PÁgÀt ªÀåªÀ¸ÉÜAiÀÄ ±ÉÆõÀPÀ ªÀUÀðUÀ¼ÀÄ EA¢UÀÆ vÀªÀÄä ¥Á槮åªÀ£ÀÄß ªÉÄgÉAiÀÄÄwÛgÀĪÀÅzÉà PÁgÀtªÁVzÉ.

d£À¸ÀAWÀµÀðUÀ¼À£ÀÄß, d£ÁAzÉÆî£ÀUÀ¼À£ÀÄß ªÀÄvÀÄÛ d£À¸ÁªÀiÁ£ÀågÀ ¥ÀæeÁ¸ÀvÁÛvÀäPÀ ºÉÆÃgÁlUÀ¼À£ÀÄß ºÉƸÀ gÀÆ¥ÀUÀ¼À°è PÁtÄwÛgÀĪÀ F ¸ÀAzÀ¨sÀðzÀ¯Éèà D¼ÀĪÀ ªÀUÀðUÀ¼ÀÄ ±Àæ«ÄPÀ ªÀUÀðUÀ¼À D±ÀAiÀÄUÀ¼À£ÀÄß aªÀÅn ºÁPÀĪÀ £ÀªÀ «zsÁ£ÀUÀ¼À£ÀÄß C£ÀĸÀj¸ÀÄwÛgÀĪÀÅzÀÄ ¸ÀªÀÄPÁ°Ã£À ¸ÀAzÀ¨sÀðzÀ°è PÁt§ºÀÄzÁVzÉ. EAw¥Àà ¸À¤ßªÉñÀzÀ°è eÁUÀwPÀ ªÀÄlÖzÀ ±ÀæªÀÄfë ªÀUÀðUÀ½UÉ ¥Àæ¨sÀÄvÀézÀ «gÀÄzÀÞ ºÉÆÃgÁqÀ®Ä MAzÀÄ ºÉƸÀ DAiÀiÁªÀÄ ªÀÄvÀÄÛ ¸ÀAWÀµÀðzÀ ªÀiÁUÀðUÀ¼ÀÄ C¤ªÁAiÀÄð J¤¸ÀÄvÀÛzÉ. F ºÉƸÀ DAiÀiÁªÀĪÀ£ÀÄß ZÉ ªÀÄvÀÄÛ CªÀgÀ PÁæAwPÁj ¥ÀgÀA¥ÀgÉ MzÀV¸ÀĪÀÅzÀ£ÀÄß C®èUÀ¼ÉAiÀįÁUÀĪÀÅ¢®è. UÉj¯Áè AiÀÄÄzÀÞzÀ ªÀÄÆ®PÀ vÀªÀÄä ±ÀvÀÄæUÀ¼À zÀªÀÄ£À ªÀiÁrzÀ ZÉ CªÀgÀ PÁAiÀÄðvÀAvÀæUÀ¼À£ÀÄß AiÀÄxÁªÀvÁÛV C¼ÀªÀr¸ÀĪÀÅzÀÄ ¸ÀªÀÄPÁ°Ã£À ¸ÀAzÀ¨sÀðzÀ°è C¥Àæ¸ÀÄÛvÀªÉ¤¸À§ºÀÄzÀÄ. DzÀgÉ ZÉ CªÀgÀÄ ¤«Äð¹zÀ ºÉÆÃgÁlzÀ ªÀiÁUÀðUÀ¼ÀÄ AiÀiÁªÀÅzÉÆà MAzÀÄ gÀÆ¥ÀzÀ°è EA¢UÀÆ ¥Àæ¸ÀÄÛvÀ JA§ÄzÀ£ÀÄß C®èUÀ¼ÉAiÀįÁUÀĪÀÅ¢®è.

F ¤nÖ£À°è ¥Àæ¸ÀÄÛvÀ PÀÈw dUÀwÛ£ÁzÀåAvÀ £ÀqÉAiÀÄÄwÛgÀĪÀ d£À¥ÀgÀ ºÉÆÃgÁlUÀ½UÉ MAzÀÄ ºÉƸÀ DAiÀiÁªÀÄ MzÀV¸ÀĪÀÅzÉAzÀÄ ¨sÁ«¸ÀÄvÉÛãÉ. PÀÆå¨ÁzÀ PÁæAwAiÀÄ£ÀÄß AiÀıÀ¹éUÉƽ¸ÀĪÀÅzÉà C®èzÉ, DgÀÄ zÀ±ÀPÀUÀ¼À PÁ® ¸ÁªÀiÁædå±Á»UÀ¼À zÁ½UÀ¼À£ÀÄß JzÀÄj¹ vÀ£ÀßzÉà DzÀ ¸ÁªÀð¨s˪ÀÄvÉAiÀÄ£ÀÄß gÀQë¹PÉÆArgÀĪÀ PÁå¸ÉÆÖçà CªÀgÀ PÁæAwPÁj ªÀiÁUÀðPÉÌ ¨sÀzÀæ §Ä£Á¢ MzÀV¹zÀªÀgÀÄ ZÉ UÀĪÁgÀ. EAvÀºÀ ¢üêÀÄAvÀ PÁæAwPÁjAiÀÄ ZÁjwæPÀ ºÉeÉÓUÀ¼À£ÀÄß M§â MqÀ£ÁrAiÀÄ ªÀiÁvÀÄUÀ¼À¯Éèà PÉüÀĪÀÅzÀÄ D¸ÀQÛzÁAiÀÄPÀªÀµÉÖà C®è, ¸ÀÆáwðzÁAiÀÄPÀªÀÇ DUÀ§ºÀÄzÀÄ. ¥Àæ¸ÀÄÛvÀ PÀÈwAiÀÄ°è PÁå¸ÉÆÖçà CªÀgÀ ¸Àäøw¥Àl®¢AzÀ ºÉÆgÀºÉÆ«ÄägÀĪÀ ZÉ CªÀgÀ ºÉeÉÓUÀ¼À ¸ÀzÀÄÝ ¸ÀªÀÄPÁ°Ã£À ¸ÀAzÀ¨sÀðzÀ d£À¥ÀgÀ ¸ÀAWÀµÀðUÀ½UÉ ªÀiÁUÀðzÀ±Àð£À ¤ÃqÀĪÀÅzÀµÉÖà C®èzÉ, ZÁjwæPÀ DAiÀiÁªÀĪÀ£ÀÆß MzÀV¸ÀÄvÀÛzÉ. ªÀiÁPïìðªÁzÀªÀ£ÀÄß DAiÀiÁ zÉñÀUÀ¼À UÀÄt®PÀëtUÀ½UÉ C£ÀÄUÀÄtªÁV C¼ÀªÀr¸À¨ÉÃPÁzÀ C¤ªÁAiÀÄðvÉAiÀÄ£ÀÄß ZÉ ªÀÄvÀÄÛ PÁå¸ÉÆÖçà CªÀgÀ PÁæAwPÁj ºÉeÉÓUÀ¼ÀÄ ¸ÀàµÀÖªÁV UÀÄgÀÄw¸ÀÄvÀÛªÉ.

£ÀªÀ GzÁgÀªÁzÀzÀ ¥ÀæºÁgÀ¢AzÀ vÀvÀÛj¸ÀÄwÛgÀĪÀ dUÀwÛ£À ±Àæ«ÄPÀ ªÀUÀðUÀ½UÉ, ±ÉÆövÀ d£À¸ÀªÀÄÄzÁAiÀÄUÀ½UÉ ZÉ CªÀgÀ PÁæAwPÁj ºÉeÉÓUÀ¼ÀÄ JZÀÑjPÉAiÀÄ UÉeÉÓ£ÁzÀUÀ¼ÀAvÉ ¥Àjt«Ä¸ÀÄvÀÛªÉ. ¨sÁgÀvÀzÀ®èµÉÖà C®èzÉ «±ÀézÀ EvÀgÀ gÁµÀÖçUÀ¼À®Æè ¸ÁªÀiÁædå±Á» ±ÀQÛUÀ¼À «gÀÄzÀÞ C«gÀvÀ ºÉÆÃgÁl £ÀqɹgÀĪÀ C£ÉÃPÀ d£À¸ÀAWÀµÀðUÀ½UÉ ZÉ CªÀgÀ ªÀåQÛ avÀæt MAzÀÄ ªÀiÁUÀðzÀ²ð ¸ÀÆvÀæªÀ£ÀÄß MzÀV¸ÀÄvÀÛzÉ. F zÀȶ֬ÄAzÀ¯Éà ¥Àæ¸ÀÄÛvÀ PÀÈw d£À¥ÀgÀ ºÉÆÃgÁlUÀ½UÉ C¥ÁåAiÀĪÀiÁ£ÀªÁUÀÄvÀÛzÉ. PÁæAwAiÀÄ ¥ÀjPÀ®à£ÉAiÀÄ£ÀÄß »A¸É-C»A¸ÉAiÀÄ ¥Àj¢üAiÀįÉèà «±Éèö¸À¯ÁUÀÄwÛgÀĪÀ ¸ÀªÀÄPÁ°Ã£À ¸ÀAzÀ¨sÀðzÀ°è ZÉ CªÀgÀ PÁæAwAiÀÄ ºÉeÉÓUÀ¼À£ÀÄß UÀÄgÀÄw¸ÀĪÀ F CªÀÄÆ®å PÀÈw MAzÀÄ «©ü£Àß DAiÀiÁªÀĪÀ£ÀÄß MzÀV¸À§®èzÀÄ. F PÀÈwAiÀÄ ªÀĺÀvÀéªÀÇ EzÀgÀ¯Éèà CqÀVzÉ.

EAvÀºÀ CªÀÄÆ®å PÀÈwAiÀÄ£ÀÄß C£ÀĪÁ¢¸À®Ä ¥ÉæÃgÀuÉ, ¸ÀºÀPÁgÀ ªÀÄvÀÄÛ ¥ÉÆæÃvÁìºÀ ¤ÃrzÀ ®qÁ¬Ä ¥ÀæPÁ±À£ÀzÀ ¹§âA¢UÀ½UÀÆ, §¸ÀªÀgÁeï ¸Àƽ¨sÁ«AiÀĪÀjUÀÆ ªÀÄvÀÄÛ ¥ÀævÀåPÀëªÁV, ¥ÀgÉÆÃPÀëªÁV £ÉgÀªÁzÀ J®è ¸ÀAUÁwUÀ½UÀÆ £À£Àß ºÀÈvÀÆàªÀðPÀ PÀÈvÀdÕvÉUÀ¼À£ÀÄß C¦ð¸ÀÄvÉÛãÉ.

£Á ¢ªÁPÀgÀ

Tuesday, August 2, 2011

ಹೊಸ ತಲ್ಲಣ - ಸವಾಲುಗಳ ಕಾವ್ಯಪರೀಕ್ಷೆ


 ಇದು ಕವಿ ಚಂದ್ರಶೇಖರ ತಾಳ್ಯರ ಐದನೆಯ ಕವನ ಸಂಕಲನ. ಬಂಡಾಯ ಪರಂಪರೆಯಲ್ಲಿ ಬೆಳೆದು ಬಂದ ಇವರ ಮೊದಲ ಸಂಕಲನ `ನನ್ನ ಕಣ್ಣಗಲಕ್ಕೆ` ಸ್ವಾಭಾವಿಕ ಆಕ್ರೋಶದ ಹೊರತಾಗಿಯೂ ಕಲಾತ್ಮಕ ಹಾಗೂ ಸ್ವಂತಿಕೆಯ ಸಾಧ್ಯತೆಗಳತ್ತ ಚಿಂತಿಸಿತ್ತು. 

`ಸಿಂಧೂ ನದಿಯ ದಂಡೆಯ ಮೇಲೆ` ಎಂಬ ಎರಡನೆಯ ಸಂಕಲನವು ಆಧುನಿಕ ಮತ್ತು ಅನುಭಾವಿಕ ಪ್ರೇರಣೆಗಳಲ್ಲಿ ವಿಶ್ವವನ್ನೇ ಪರಿಭಾವಿಸುವ ಉತ್ಸಾಹ ಹೊಂದಿತ್ತು.  `ಸುಡುವ ಭೂಮಿ` ಎಂಬ ಮೂರನೆಯ ಸಂಕಲನವು ತಾಳ್ಯರ ಮಾಗಿದ ಚಿಂತನೆ, ಗಟ್ಟಿ ಶಿಲ್ಪ, ಗಂಭೀರ ಪ್ರಯತ್ನಗಳಿಂದ ಪ್ರಾತಿನಿಧಿಕವೆಂಬಂತೆ ಬದಲಾಯಿತು. 

ತಮ್ಮ ನಾಲ್ಕನೆಯ ಸಂಕಲನ `ಎಲ್ಲಿ ನವಿಲು ಹೇಳಿರೇ` ಬರುವಷ್ಟರಲ್ಲಿ ತಾಳ್ಯರ ಕಾವ್ಯ ಧೋರಣೆಗಳು ಬೇರೆಯಾಗಿದ್ದವು. ಅವರು ಭಾವ ಮತ್ತು ಗೇಯ ಗುಣಗಳ ಮೂಲಕ ಜೀವನ ಪ್ರೀತಿಯನ್ನು ಅರಸತೊಡಗಿದರು. ಈ ಬದಲಾವಣೆಯೇ ಅಂತಿಮವೇನೋ ಎಂದು ಭಾವಿಸುವಷ್ಟರಲ್ಲಿ ಅದರಿಂದ ಹೊರಬರುವ ಆದರೆ ಹೊರಬರಲು ಪೂರ್ಣ ಸಮ್ಮತವಿಲ್ಲದ ಒಂದು ಸಂದಿಗ್ಧ ತೊಳಲಾಟದಲ್ಲಿ ತಮ್ಮ `ಕಾವಳದ ಸಂಜೆಯಲ್ಲಿ` ಎಂಬ ಐದನೆಯ ಕವನ ಸಂಕಲನ ಹೊರತಂದಿದ್ದಾರೆ. 

ಕವಿಯೊಬ್ಬ ಹೊರಳುವಿಕೆ ಮತ್ತು ಬದಲಾವಣೆಗಳಿಗಾಗಿ ಕಾತರಿಸುವುದು ಸಹಜವೆನಿಸಿದರೂ ತನ್ನ ಕಾವ್ಯ ಸತ್ವವನ್ನು ಸತತವೂ ಅನುಮಾನಿಸಬೇಕಿಲ್ಲ. ಆದರೆ ಹಳತಿನ ಸಂದೇಹ ಮತ್ತು ಹೊಸತಿನ ಪ್ರೀತಿಯ ಮುಗ್ಧ ಮತ್ತು ವಿಪರೀತ ನಂಬುಗೆಗಳಿಂದಾಗಿ ತಾಳ್ಯ ತಮ್ಮ ಕಸುಬುಗಾರಿಕೆಯನ್ನು ಬಲವಂತದ ಅಗ್ನಿದಿವ್ಯಕ್ಕೆ ಸದಾ ಒಡ್ಡಿಕೊಂಡಿದ್ದಾರೆ. ಪ್ರಸ್ತುತ ಸಂಕಲನ ಅದರ ರೂಪವಾಗಿದೆ. ಪ್ರಯೋಗಶೀಲತೆ ಮತ್ತು ಪರಿವರ್ತನಾ ಹಂಬಲವು ವೇಗದ ಪ್ರಯತ್ನವಾದಾಗ ಅದು ಉಂಟುಮಾಡುವ ಸೃಜನಾತ್ಮಕ ತಲ್ಲಣಗಳ ಛಾಯೆಯಂತೆ ಈ ಕವಿತೆಗಳಿವೆ.

ಚಂದ್ರಶೇಖರ ತಾಳ್ಯ ತಮ್ಮ ಕವಿತೆಗಳ ತಾತ್ವಿಕತೆಯನ್ನು ಪ್ರಧಾನವಾಗಿ ಕಟ್ಟಿಕೊಂಡಿರುವುದು ವಚನ ಚಳವಳಿಯ ಪ್ರಭಾವದಲ್ಲಿ. ಅದಕ್ಕೆ ತಕ್ಕಂತೆ ಭಾಷೆಯನ್ನು ರೂಪಕಾತ್ಮಕವಾಗಿ ಬಳಸುವುದು ಅವರ ಶಕ್ತಿ. ಆಗಾಗ ಅದಕ್ಕೆ ನಾಟಕೀಯ ಲಯಗಳನ್ನು ಜೋಡಿಸಿ ಅದರ ವಿನ್ಯಾಸಗಳಲ್ಲಿ ಪರಿಣಾಮದ ಸೊಲ್ಲನ್ನು ತೀವ್ರ ಕಾಳಜಿಯಿಂದ ಹುಡುಕುತ್ತಾರೆ. ಅವರ ಮುಂದೆ `ಸ್ವಪ್ನ ಪ್ರತಿಮೆಯ ಎರಕ`ವೊಂದಿದೆ.
 
(ಕುಲುಮೆಯ ಹಾಡು) ಅದರ ಹುಡುಕಾಟ ಸುಲಭವಲ್ಲ. ಹೊರಗಿನ ಜಗತ್ತು ಕ್ಷೋಭೆಗೊಳಗಾಗಿದೆ. ಅಂತರಂಗದ ಜಗತ್ತು ಆತ್ಮವಂಚನೆಯಿಂದ ಕೂಡಿದೆ. ಅದಕ್ಕೆ ಕತ್ತಲೆಯು ಮುಸುಕಿದೆ. ಬೆಳಕಿಗಾಗಿ ಕಾತರಿಸುತ್ತಲೇ ಬಂದರೂ ಈಗ ನಿಂತಿರುವುದು ಕಾವಳದ ಸಂಜೆಯಲ್ಲಿ.
 
ವೈಯಕ್ತಿಕತೆಯ ದೂಳು ಕೊಡವಿ ಸಮುದಾಯದ ಸಂಕಟವನ್ನು ಪರಿಭಾವಿಸಬೇಕೋ ಇಲ್ಲವೇ ಸಮುದಾಯದ ನೋವುಗಳಲ್ಲಿ ವೈಯಕ್ತಿಕತೆಯನ್ನು ದೂಡಬೇಕೋ ಎಂಬ ತಹತಹಿಕೆಯಲ್ಲಿ `ಸಹಗಮನ` ಎಂಬ ದಾಂಪತ್ಯಗೀತ ಮೈದಾಳಿರುವಂತೆ `ಕಲ್ಯಾಣವತ್ತಲೇ` ಎಂಬಂತಹ ವ್ಯಾಪ್ತ ರಚನೆಯೂ ಈ ಸಂಕಲನದಲ್ಲಿ ಸಾಧ್ಯವಾಗಿದೆ. ಈ ಎರಡು ಬಗೆಯ ಶೋಧದಲ್ಲಿ ಕವಿಯ ತಾದಾತ್ಮ್ಯವನ್ನು ಹೀಗೆ ಕಾಣಬಹುದು.

ಗುಡುಗು ಸಿಡಿಲಿನ ನುಡಿಕೊಂದ; ಸ್ಪಟಿಕದುಸಿರು
ಎಲ್ಲಿ ಅಡಗಿದ್ದಾನೆ ಕೂಡಲ ಸಂಗಮ
ಯಾವ ಕದಳಿಯ ಹೊಕ್ಕ್ದ್ದಿದಾನೆ ಚನ್ನಮಲ್ಲಿಕಾರ್ಜುನ
ಜೋಳಿಗೆಯ ಪವಾಡಕ್ಕೆ ಮುದುರಿಕೊಂಡನೇ ಜಂಗಮ
ಆವಾವ ಸ್ಥಲದಲ್ಲೂ ಸ್ಥಾವರ ಕಳಶ ವಿಜೃಂಭಣ
....  ....  ....  ....  ....  ....  ....  ....
ಹಿಡಿವ ಕೈಯ ಮೇಲೆ ಕತ್ತಲೆ, ನೋಡುವ ಕಂಗಳ ಮೇಲೆ ಕತ್ತಲೆ
ಕಲ್ಯಾಣವತ್ತಲೇ, ಕಲ್ಯಾಣವತ್ತಲೇ, ಕಲ್ಯಾಣವತ್ತಲೇ

ಕತ್ತಲೆ ಎಂಬ ವಾಸ್ತವ ಹಾಗು ಕಲ್ಯಾಣ ಎಂಬ ಗಮ್ಯವನ್ನು ಕಲ್ಯಾಣಕ್ರಾಂತಿಯ ಇತಿಹಾಸ ಮತ್ತು ಸಮಾಜ ಕಲ್ಯಾಣದ ವರ್ತಮಾನದಲ್ಲಿ ಯಶಸ್ವಿಯಾಗಿ ಇಟ್ಟು ನೋಡಿದ್ದಾರೆ. ಇದನ್ನು ಕವಿ `ಬಸವಣ್ಣ ತಂದ ಬಟ್ಟೆಯ ಗಂಟು` ಎಂಬ ಕವನದಲ್ಲಿ ಮತ್ತಷ್ಟು ಹರಿತವಾಗಿ ಪರೀಕ್ಷಿಸಿದ್ದಾರೆ. ಕೃಷ್ಣೆ ತನ್ನ ಒಡಲಲ್ಲಿ ಬಸವನನ್ನು ಕರಗಿಸಿಕೊಂಡಮೇಲೆ ಉಳಿದ ದಂಡೆಯ ಮೇಲಿನ ಬಟ್ಟೆಯ ಗಂಟು ಕವಿಗೆ ಕಾಲಗಳ ನಡುವಿನ ಒಂದು ಸಾಪೇಕ್ಷ ಸಂಕೇತವಾಗಿದೆ.

ತೀರದಿಂದೆದ್ದು ಬಂದು ಗಂಟು ಬಿಚ್ಚಲು
ಕಲ್ಯಾಣವೆಂಬ ಕಲ್ಯಾಣ ಗಂಟಿನೊಳಗವಿತು
ವಚನ ಲಕ್ಷದ ಲಕ್ಷ್ಯದಲ್ಲಿ ಚೂರಾದ ಗಣ
....  ....  ...
ಗಂಟು ಕೈಯಲ್ಲಿ, ಗಂಟು ಗಂಟಿನ ಬುಗುಟು ತುದಿಯಲ್ಲಿ
ಈಗಲೀಗ ತಲೆ ತಗ್ಗಿಸಿದ ಬಸವ
ಕತ್ತಿ ಝಳಪಿಸುವ ಬಿಜ್ಜಳ
ಆ ಕಡೆ ಈ ಕಡೆ ಅದೇ ಅದೇ ದಳ

ಹರಿವ ಕೃಷ್ಣೆಯ ತಡೆಯಲೆ
ಮುಳುಗು ಬಸವನ ಮೇಲೆತ್ತಲೆ
ಗಂಟು
ಬಸವನೇ ಕಗ್ಗಂಟು
ಗಂಟು ಬಿಚ್ಚಿದರೆ ಹೀಗೆ
ಕಟ್ಟಿದರೆ ಭೂತದ ಹಾಗೆ

ಈ ವಸ್ತುನಿಷ್ಠ ಶೋಧಕ್ಕೆ ಪೂರಕವಾಗಿ ದುಡಿಯುವ ಇನ್ನೊಂದು ರಚನೆ `ಕುಲುಮೆಯ ಹಾಡುಗಳು`. ಇಲ್ಲಿ, `ಕಮ್ಮೋರ ಎಂಬ ಲೌಕಿಕ ಮತ್ತು ಕರ್ತಾರ` ಎಂಬ ಅಲೌಕಿಕದ ನಡುವಿನ ಗುದಮುರಿಗೆಯಿದೆ. ಸ್ವಪ್ನ ಪ್ರತಿಮೆಯ ಎರಕದಲ್ಲಿ ಏಕಾಂತವೂ ಲೋಕಾಂತವೂ ಸೂಚ್ಯವಾಗಿ ಮೇಳೈಸಿದೆ.

ಏಕಾಗ್ರತೆಗೆ ಭಂಗ, ಆಗಾಗ ತನ್ನದೇ ಕಣ್ಣ ಕಿಸುರು
ತನಗೆ ತಾನೇ ಸವಾಲಾಗುತ್ತಿದ್ದಾನೆ ಕಮ್ಮೋರ ಭೀಮಣ್ಣ
ಜಟೆ ಬಿಚ್ಚಿ ಕೊಡವಿದ್ದಾನೆ ಬೆನ್ನ ಹಿಂದೆ, ಲಟಿಗೆ ಮುರಿಯುತ್ತಾನೆ
ಸಿಡುಕಿ ಪುಡಿ ಪುಡಿ ಮಾಡಲೆಂಬಂತೆ ಅಪೂರ್ವದ ತನ್ನ ಎರಕವನ್ನೇ

`ಸಹಗಮನ` ಎಂಬ ನೀಳ್ಗವಿತೆಯ ದುಃಖ ಬೇರೆ ರೀತಿಯದು. ಇದು ಕನ್ನಡದ ಸಖೀಗೀತಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಲ್ಲಂತಹ ರಚನೆ. ಮನೆಯೊಳಗಿನ ಜೀವ ಸಂಬಂಧಗಳ ಎರಕದ ಹಾಡು ಮತ್ತು ಪಾಡುಗಳೆರಡನ್ನೂ ಒಳಗೊಂಡಿರುವ ಇಲ್ಲಿಯ ಕಥಾನಕವು ಸೊಗಸಾದ ಲಯ ಹೊಂದಿದೆ. ಕುಟುಂಬಕ್ಕೆ ಹೆದ್ದಾರಿಯ ಚರಿತೆಯಿರುವಂತೆ ಮಡಿಲ ದಾರಿಯೂ ಇದ್ದು ಇವುಗಳ ಸಮಾಯೋಜಕ ಹೆಣಿಗೆ ಮತ್ತು ಧೈರ್ಯಯುತ ನಡೆ ಇಲ್ಲಿಯ ಲಕ್ಷಣ. ಈ ಆಖ್ಯಾನದಲ್ಲಿ ಹಲವು ಮಿಡಿತದ ಪ್ರಶ್ನೆಗಳಿವೆ.

ಎಲ್ಲ ಸಂಜೆಯ ಹಾಡಿನಂತಲ್ಲವೀ ಸಂಜೆ ಹಾಡು
ಮುಂದೆ ಸಾಗರ ಬಿದ್ದ ಇರುಳಿನಂಥಾ ಪಾಡು
ಬಂಡಿ ಜಾಡನು ಬಿಟ್ಟು ಏಸು ಕಾಲವೋ ಏನೋ
ಹೆದ್ದಾರಿ ಚರಿತೆಗೋ ಯಾವುದ್ಯಾವುದು ಈಡು

ಮುಖ ಮರೆಸಿ ಕರಿ ಪರದೆ ರಂಗದಂಗಳದಲ್ಲಿ
ಜಗದ ದೀಪಗಳೆಲ್ಲ ಅದರ ಹಿಂದೆ
ಪರದೆ ಸರಿಯುವ ತನಕ ಕತ್ತಲೆಯ ಕೂಸುಗಳು
ನಾನು ಹೊಣೆಯೋ ನೀನು ಹೊಣೆಯೋ ನೆನಪೊಂದು ಮುಂದೆ

ಕಾಲ ಪರಿಪ್ರೇಕ್ಷ್ಯ ಮತ್ತು ಸಂಬಂಧ ಸೂಕ್ಷ್ಮಗಳನ್ನು ಅಮೂರ್ತವಾಗಿ ಆದರೆ ಪರಿಣಾಮಕಾರಿಯಾಗಿ ಹಿಡಿಯುವ `ಯಾವ ಚಿತ್ತದ ಮಳೆ`, ಕೆಲ ವಿಶಿಷ್ಟ ರೂಪಕಗಳ `ಭೂರಮೆಯ ಗಾನ`, `ಒಂಟಿ ದನಿಯ ಕೂಗು`, `ಕಾಯುವ ಕ್ರಿಯೆ` ಇಂತಹ ಕವಿತೆಗಳು ಗಮನ ಸೆಳೆಯುತ್ತವೆ.

ಇಷ್ಟಾಗಿಯೂ ತಾಳ್ಯರ ಸಮಸ್ಯೆಯಿರುವುದು ಸಂಕಲನದ ಬಹುತೇಕ ಕವನಗಳಲ್ಲಿ ಹಬ್ಬಿರುವ ಕಾವಳಕ್ಕೆ ತಕ್ಕ ನೆಲೆಯನ್ನು ತಾರ್ಕಿಕವಾಗಿ ಕಂಡುಕೊಳ್ಳದಿರುವಲ್ಲಿ ಮತ್ತು ಅವರ ಕಾವ್ಯ ಹಾಗೂ ರೂಪಕ ಮೂಲಗಳು ಸಮಕಾಲೀನ ಕಾವ್ಯದ ಹೊಸ ಬೆಳವಣಿಗೆಗಳನ್ನು ಆಸ್ಥೆಯಿಂದ ಕಾಣದಿರುವಲ್ಲಿ.

ಯಾರು ಮುರಿದರು ಕೈಯ ಯಾರು ಹರಿದರು ನಾಲಗೆ
ಯಾರು ಕೊಯ್ದರು ಕರುಳು ಕಿತ್ತು ಬಿಟ್ಟವರಾರು ಕಣ್ಣ    
(ಕತ್ತಲೆ ಕತ್ತಲೆಯನೆ ದೂಡುತಿದೆ)

ಪ್ರಾತಃಕಾಲದ ಓ ರವಿ ಕಿರಣವೇ ಗರಿಕೆ ಮೇಲಿನ ಇಬ್ಬನಿಯ ತಣಿವೇ
ಹಕ್ಕಿ ಗೊರಲಿನ ಸೂಕ್ಷ್ಮ ಸಂಗೀತವೇ ಸಂಜೆಬಾನಿಗೆ ತಾರೆ ಎಸೆದ ಮಿನುಗೇ 
ಧರೆಗಿಳಿದು ಧಗೆ ಕಳೆದ ಚಂದ್ರಮನ ಬೆಳಕೇ ಭುವನ ಕುಸುಮ ಪರಾಗವೇ         
(ನಿನಗೆಂದು ಶಾಂತಿ)

ಇಗೋ ನಾನು ಸಂಪಿಗೆಯ ಹೂವಾಗುವೆ
ಮಾಮರದ ಹಾಡಾಗುವೆ
ಮೂಡುವ ಕಿರಣಗಳಲ್ಲಿ 
ಮೂಸುವ ಮುಂಜಾವುಗಳಲ್ಲಿ 
ಉಷೆಯ ಕನ್ನಡಿಯಲ್ಲಿ ಬೆಳಗುತ್ತಲೇ ಇರುವೆ  
(ಮೇಲಧಿಕಾರಿಗೆ)

ಸಂಕಲನದುದ್ದಕ್ಕೂ ಇರುವ ಮೇಲುಸ್ತರದ ಇಂತಹ ಅನುರಣನ ತನ್ನ ರಮ್ಯ ತೋರಿಕೆಯನ್ನು ಸಾಬೀತುಪಡಿಸುವುದೇ ವಿನಾ ಕಾವ್ಯಕ್ಕೆ ಆಯಾಮ ತಂದುಕೊಡಬಲ್ಲ ಶಿಲ್ಪವಾಗುವುದಿಲ್ಲ. ಒಳಿತಾಗಲಿ ಕೆಡುಕಾಗಲಿ ಸಿದ್ಧ ಜೋಡಿಸುವಿಕೆಯಲ್ಲಿ ಮಾತಿಗೆ ಮಾತ್ರ ಕಟ್ಟುಬಿದ್ದಂತೆ ಎಷ್ಟೋ ಕಡೆ ಭಾಸವಾಗುತ್ತದೆ. 

ಸಂಕಲನದ ಎರಡನೆಯ ಭಾಗದಲ್ಲಿರುವ ಪ್ರಕೃತಿಯ ಗೇಯ ಲಹರಿಗಳು ಲಾಲಿತ್ಯದಿಂದ ಗಮನ ಸೆಳೆದರೂ ಸ್ವಂತಿಕೆ ಮತ್ತು ಸಮೃದ್ಧತೆಯ ಹೊಸತನ ತೋರುವುದಿಲ್ಲ. ಮೂರನೆಯ ಭಾಗದ ವ್ಯಕ್ತಿಚಿತ್ರಗಳು ಸಂಕಲನದ ಧೋರಣೆ ಮತ್ತು ನಂಬಿಕೆಗಳ ಅಂತರ್ಗತ ಭಾವವಾಗುವುದಿಲ್ಲ.
 
ಇಂತಲ್ಲಿ ತಾವೇ ನಿರ್ಮಿಸಿಕೊಂಡ ಸೀಮಿತ ಆಕೃತಿಕಲ್ಪಗಳ ಮುಂದೆ ಪರಿಪರಿಯಾಗಿ ಕಾವ್ಯಾತ್ಮಕವಾಗಿ ನಿವೇದಿಸುವಂತೆ ಕಾಣುವ ಕವಿಯ ಕಾವ್ಯಶಕ್ತಿಯು ವಸ್ತು ಬಹುಳತೆ, ವ್ಯಾಪ್ತ ನಿರ್ವಹಣೆ ಮತ್ತು ತನ್ನದೇ ಆದ ಭಾಷೆಯೊಂದನ್ನು ಅಪೇಕ್ಷಿಸುವಂತೆ ತೋರುತ್ತದೆ. ಇದು ತಾಳ್ಯರು ಆಹ್ವಾನಿಸಿಕೊಂಡಿರುವ ಹೊಸ ತಲ್ಲಣ ಮತ್ತು ಸವಾಲು.

ಕಾವಳದ ಸಂಜೆಯಲ್ಲಿ
ಲೇ: ಚಂದ್ರಶೇಖರ ತಾಳ್ಯ
ಪು: 132; ಬೆ: ರೂ. 80
ಪ್ರ: ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ